Breaking News

ಯೋಧರ ಮೇಲೆ ಕಲ್ಲು ತೂರಾಟ ನಡೆಸಿದವನಿಗೆ 10 ಲಕ್ಷ ಪರಿಹಾರ ನೀಡಿ: ಮಾನವ ಹಕ್ಕು ಆಯೋಗ


ಹೊಸದಿಲ್ಲಿ: ಯೋಧರ ಮೇಲೆ ಕಲ್ಲು ತೂರಾಟ ನಡೆಸಿದವನನ್ನು ಭಾರತೀಯ ಸೇನೆ ಮಾನವ ಗುರಾಣಿಯಾಗಿ ಬಳಸಿದ ಪ್ರಕರಣದಲ್ಲಿ, ಕಲ್ಲು ತೂರಾಟಗಾರನಿಗೆ 10 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ಜಮ್ಮು ಮತ್ತು ಕಾಶ್ಮೀರ ಮಾನವ ಹಕ್ಕುಗಳ ಆಯೋಗ ರಾಜ್ಯ ಸರಕಾರಕ್ಕೆ ಆದೇಶಿಸಿದೆ.

'ಕಲ್ಲು ತೂರಾಟ ನಡೆಸಿದ ಫಾರೂಕ್‌ ಅಹ್ಮದ್‌ ದರ್‌ಗೆ ಪ್ರಾಣಾಪಾಯ ಹಾಗೂ ಘನತೆಗೆ ಧಕ್ಕೆ ಉಂಟುಮಾಡಿದ್ದಕ್ಕಾಗಿ ಪರಿಹಾರ ನೀಡಬೇಕೆಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ್ದೇನೆ' ಎಂದು ಎಸ್‌ಎಚ್‌ಆರ್‌ಸಿ ಮುಖ್ಯಸ್ಥ ಬಿಲಾಲ್‌ ನಾಝ್ಕಿ ಹೇಳಿದ್ದಾರೆ.

ಇಷ್ಟಾದರೂ ಸೇನಾಪಡೆಗೆ ಆದೇಶ ನೀಡುವ ಧೈರ್ಯವನ್ನು ಅವರು ತೋರಿಲ್ಲ. ತಮಗೆ ಆ ಅಧಿಕಾರವಿಲ್ಲ ಎಂದಷ್ಟೇ ತಿಳಿಸಿ, ರಾಜ್ಯ ಸರಕಾರಕ್ಕೆ ಮಾತ್ರ ಆದೇಶ ನೀಡಿದ್ದಾರೆ.

ಏಪ್ರಿಲ್‌ 9ರಂದು ಬಡ್ಗಾಂ ಜಿಲ್ಲೆಯಲ್ಲಿ ಸೇನಾ ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ ಗುಂಪಿನಿಂದ ಯೋಧರನ್ನು ಪಾರುಮಾಡಲು ಗುಂಪಿನ ಮುಖಂಡ ಫಾರೂಕ್ ಅಹ್ಮದ್ ದರ್‌ನನ್ನು ಸೇನಾ ಜೀಪಿಗೆ ಕಟ್ಟಿ ಮೆರವಣಿಗೆ ಮಾಡಲಾಗಿತ್ತು.

No comments