Breaking News

ಕಂದಕಕ್ಕೆ ಉರುಳಿದ ಬಸ್‌ 10 ಅಮರನಾಥ ಯಾತ್ರಿಗಳ ಸಾವುನವದೆಹಲಿ : ಕಾಶ್ಮೀರದ ರಾಮ್‌ಬನ್ ಜಿಲ್ಲೆಯಲ್ಲಿ ಬಸ್ಸು ಕಣಿವೆಗೆ ಉರುಳಿದ್ದು, ಹಿಮಲಿಂಗ ದರ್ಶನ ಪಡೆಯಲು ಅಮರನಾಥ ಯಾತ್ರೆಗೆ ತೆರಳುತ್ತಿದ್ದ ಹತ್ತು ಮಂದಿ ಮೃತಪಟ್ಟಿದ್ದಾರೆ.ಘಟನೆಯಲ್ಲಿ 35 ಮಂದಿ ಗಾಯಗೊಂಡಿದ್ದಾರೆ. ಬನಿಹಲ್‌ ಸಮೀಪ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ ಎಂದು ವರದಿಯಾಗಿದೆ


ಕಳೆದ ವಾರ ಅನಂತ್‌ನಾಗ್‌ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಗಳಿದ್ದ ಬಸ್‌ಮೇಲೆ ಉಗ್ರರು ನಡೆಸಿರುವ ದಾಳಿಗೆ ಎಂಟು ಯಾತ್ರಿಗಳು ಬಲಿಯಾಗಿದ್ದರು.

ನಲ್ವತ್ತು ದಿನಗಳ ಅಮರನಾಥಯಾತ್ರೆ ಜೂನ್‌ 27ರಂದು ಆರಂಭಗೊಂಡಿದ್ದು, ಆಗಸ್ಟ್ 7ರಂದು ಶ್ರಾವಣ ಪೂರ್ಣಿಮೆಯ ದಿನ ಯಾತ್ರೆ ಕೊನೆಗೊಳ್ಳಲಿದೆ.


No comments