Breaking News

1೦ ನೇ ತರಗತಿ ಬಾಲಕಿ ಮೇಲೆ 6 ತಿಂಗಳಿನಿಂದ ನಿರಂತರ ರೇಪ್ ಶಾಲೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ



ನವದೆಹಲಿ: ನೆರೆಮನೆಯ ಆಟೋ ಡ್ರೈವರ್‌ನ ಹೀನ ಕೃತ್ಯದಿಂದ 17 ವರ್ಷದ ಬಾಲಕಿ ಗರ್ಭಿಣಿಯಾಗಿ ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಬಾಲಕಿ ಮೇಲೆ ನಿರಂತರವಾಗಿ ರೇಪ್ ಎಸಗಿರುವ 50ವರ್ಷದ ಆಟೋ ಡ್ರೈವರ್‌‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆಟೋ ಡ್ರೈವರ್ ಕಳೆದ 6 ತಿಂಗಳಿಂದ ಬಾಲಕಿ ಮೇಲೆ ರೇಪ್ ಎಸಗುತ್ತಿದ್ದ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. ಈ ವಿಷಯ ಬಾಲಕಿಯ ಪೋಷಕರಿಗೂ ಗೊತ್ತಿರಲಿಲ್ಲ. ಜೊತೆಗೆ ಆಟೋ ಡ್ರೈವರ್‌ಗೂ ಗೊತ್ತಿದ್ದಂತೆ ಕಾಣುತ್ತಿಲ್ಲ. ಗುರುವಾರ ಶಾಲೆಗೆ ಹೋದ ವೇಳೆ ಶಾಲೆಯ ಬಾತ್‌ರೂಂನಲ್ಲಿ ಪ್ರಸವ ಪೂರ್ವವೇ ಮಗುವಿಗೆ ಬಾಲಕಿ ಜನ್ಮ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
10ನೇ ತರಗತಿ ಬಾಲಕಿ ಉತ್ತರ ದೆಹಲಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಗುರುವಾರ ಶಾಲೆಯ ಬಾತ್‌ರೂಂನಲ್ಲಿ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಡೆಪ್ಯೂಟಿ ಪೊಲೀಸ್ ಆಯುಕ್ತ ಮಿಲಿಂದ್ ಡುಂಬೆರ್‌ ತಿಳಿಸಿದ್ದಾರೆ.

No comments