ಎತ್ತು ಖರೀದಿಗೆ ಹಣವಿಲ್ಲ ಎಂದು ಹೆತ್ತ ಮಕ್ಕಳನ್ನು ಉಳುಮೆಗೆ ಬಳಸಿದ ತಂದೆ
ಮಧ್ಯಪ್ರದೇಶ : ರೈತನೊಬ್ಬ ಉಳುಮೆ ಮಾಡಲು ಎರಡು ಎತ್ತು ಖರೀದಿ ಮಾಡುವಷ್ಟು ಹಣ ಆತನ ಬಳಿ ಇಲ್ಲದ ಕಾರಣ ಸೆಹೋರ್ ಜಿಲ್ಲೆಯ ಬಸಂತ್‌ಪುರ್ ಗ್ರಾಮದ ರೈತ ತನ್ನಿಬ್ಬರು ಹೆಣ್ಣುಮಕ್ಕಳಾದ ರಾಧಿಕಾ (14) ಹಾಗೂ ಕುಂತಿ (11) ಅವರನ್ನ ಬಳಸಿಕೊಂಡು ಹೊಲ ಉಳುಮೆ ಮಾಡುತ್ತಿದ್ದಾರೆ.
ಎತ್ತು ಖರೀದಿ ಮಾಡುವಷ್ಟು ಹಣ ನನ್ನ ಬಳಿ ಇಲ್ಲ. ಆರ್ಥಿಕ ತೊಂದರೆಯಿಂದ ನನ್ನಿಬ್ಬರು ಹೆಣ್ಣುಮಕ್ಕಳ ಶಾಲೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾಗಿ ಆತ ಹೇಳಿದ್ದಾನೆ. ಈ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಸರ್ಕಾರಿ ಯೋಜನೆಯಡಿ ನೆರವು ಒದಗಿಸಲಾಗುವುದೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.Don't have enough money to buy oxen, ploughing fields to sow of maize crop. Daughter left studies after 8th standard: Sardar Barela, farmer pic.twitter.com/ofsRIa0DsA
— ANI (@ANI_news) July 9, 2017
No comments