Breaking News

ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಖಡಕ್ ವಾರ್ನಿಂಗ್! ಶಾ ಗರಂ ಆಗಿದ್ದು ಯಾಕೆ?



ಬೆಂಗಳೂರು: ಅಮಿತ್ ಶಾ ಬೆಂಗಳೂರು ಆಗಮನದ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ್ ರಾವ್, ಆಂಧ್ರ ಬಿಜೆಪಿ ನಾಯಕಿ ಪುರಂದರೇಶ್ವರಿ, ರಾಜ್ಯ ವಕ್ತಾರ ಸುರೇಶ್ ಕುಮಾರ್, ಯುವ ಘಟಕದ ಅಧ್ಯಕ್ಷ ಮುನಿರಾಜುಗೌಡ ಏರ್‍ಪೋರ್ಟ್‍ಗೆ ಆಗಮಿಸಿದ್ದರು. ಅಮಿತ್ ಶಾ ಹಾದುಹೋಗುವ ರಸ್ತೆಯ ಬದಿಗಳಲ್ಲಿ ದೊಡ್ಡ ದೊಡ್ಡ ಪ್ಲೆಕ್ಸ್ ಗಳು ರಾರಾಜಿಸುತ್ತಿದ್ದು
ಫ್ಲೆಕ್ಸ್ ಗಳಿಗೆ ಅಮಿತ್ ಶಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಫ್ಲೆಕ್ಸ್ ರಾಜಕಾರಣದ ಮೂಲಕ ನನ್ನ ಮನವೊಲಿಸಲು ಸಾಧ್ಯವಿಲ್ಲ. ಫ್ಲೆಕ್ಸ್ ಹಾಕಿ ರಾಜಕಾರಣ ಮಾಡಿದ್ರೆ ನಮ್ ಹತ್ರ ಆಟ ನಡೆಯಲ್ಲ. ಕೆಲಸದಲ್ಲಿ ನಿಮ್ಮ ಶಕ್ತಿ ಪ್ರದರ್ಶನ ತೋರಿಸಿ. ಫ್ಲೆಕ್ಸ್ ಗೆ ಸುರಿದಿರುವ ಹಣವನ್ನ ದುರ್ಬಲರಿಗೆ ಸಹಾಯ ಮಾಡಿ, ನಿಮಗೂ ಹೆಸರು ಬರುತ್ತೆ, ಪಾರ್ಟಿಗೂ ಹೆಸರು ಬರುತ್ತೆ ಅಂತ ರಾಜ್ಯಾಧ್ಯಕ್ಷರ ಮೂಲಕ ರಾಜ್ಯದ ನಾಯಕರಿಗೆ  ಕ್ಲಾಸ್ ಮಾಡಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿದುಬಂದಿದೆ
Source: online

No comments