ಅಂಡರ್-14 ಕ್ರಿಕೆಟ್ ನಲ್ಲಿ 5 ವರ್ಷದ ಬಾಲಕನ ಬ್ಯಾಟಿಂಗ್ ವೈಖರಿ ನೋಡಿದ್ರೆ ಶಾಕ್ ಆಗ್ತೀರ
ನವದೆಹಲಿ,ನ.24- ಆ ಪೋರನಿಗಿನ್ನೂ ಎಲ್ಲ ಮಕ್ಕಳಂತೆ ಆಡಿ ನಲಿಯುವ ವಯಸ್ಸು . ಆದರೆ ಈ ಪುಟ್ಟ ಬಾಲಕ ಆಡಿದ್ದು ಎಲ್ಲಿ ಗೊತ್ತೇ ಕ್ರಿಕೆಟ್ ಮೈದಾನದಲ್ಲಿ ಅದು ಅಂಡರ್ 14ರ ದೆಹಲಿ ತಂಡದ ಪರ ಆತ ಕ್ರೀಸ್‍ಗೆ ಇಳಿದಿದ್ದಾನೆ ಎಂದರೆ ಎಲ್ಲರಲ್ಲೂ ಕುತೂಹಲ ಮೂಡುವುದು ಸಹಜ. 5 ವರ್ಷದ ಬಾಲಕ ರುದ್ರಪ್ರತಾಪ್ ಬ್ಯಾಟಿಂಗ್ ಮಾಡುತ್ತಿರುವ ದೃಶ್ಯಗಳು ಅಂತರ್ಜಾಲದಲ್ಲಿ ಭಾರೀ ಸಂಚಲನವನ್ನೇ ಮೂಡಿಸಿದೆ. ಈ ಪುಟ್ಟ ಪೋರನು ಬ್ಯಾಟಿಂಗ್ ಮಾಡುವ ರೀತಿಯನ್ನು ಗಮನಿಸಿದರೆ ಎಂತಹ ಅಂತಾರಾಷ್ಟ್ರೀಯ ಘಟಾನುಘಟಿ ಬ್ಯಾಟ್ಸ್‍ಮನ್‍ಗಳಿಗೂ ಸವಾಲು ಹಾಕುವಷ್ಟು ಸಮರ್ಥನಾಗಿದ್ದಾನೆ ಎಂದು ಹೇಳಬಹುದು.
ಅಂದ ಹಾಗೆ ರುದ್ರಪ್ರತಾಪ್‍ನಿಗೆ ಅನುಗುಣವಾಗಿ ಹೈಲ್ಮೆಟ್ ಅನ್ನು ತಯಾರಿಸುವುದು ಕಷ್ಟ ಸಾಧ್ಯವಾಗಿರುವುದರಿಂದ ಆ ಪುಟ್ಟ ಪೋರ ಕ್ಯಾಪ್ ಧರಿಸಿ ಅದರ ಮೇಲೆ ಹೈಲ್ಮೆಟ್ ಧರಿಸುತ್ತಾನೆ. ಮೈದಾನದ ನಡುವೆ ಚಿಗರೆಯ ಮರಿಯಂತೆ ರನ್‍ಗಳನ್ನು ಕದಿಯುವ ಈತನ ಆಟವನ್ನು ನೋಡುವುದೇ ಬಲು ಸೊಗಸು . ಯಾರಿಗೆ ಮುಂದೊಂದು ದಿನ ಈ ಬಾಲಕ ಮತ್ತೊಬ್ಬ ಸಚಿನ್‍ತೆಂಡೂಲ್ಕರ್, ವಿರಾಟ್‍ಕೊಹ್ಲಿ ಆಗಬಹುದೇನೋ. ಏನೇ ಆಗಲಿ ಈಗ ಈ ಪುಟ್ಟ ಬಾಲಕ ಬ್ಯಾಟಿಂಗ್ ಸ್ಟೈಲ್‍ಅನ್ನು ಅಂತರ್ಜಾಲದಲ್ಲಿ ಒಮ್ಮೆ ವೀಕ್ಷಿಸಿ ಆನಂದಪಡಿ.
No comments