ಸೋನಿಯಾ ಪಾತ್ರದಲ್ಲಿ ಪ್ರೀಡಾ ಪಿಂಟೋ...!
ಆಸ್ಕರ್ ಪ್ರಶಸ್ತಿ ಗೆದ್ದ ಸ್ಲಂಡಾಗ್ ಮಿಲೆನಿಯರ್ ಸಿನಿಮಾ ಖ್ಯಾತಿಯ ನಟಿ ಫ್ರೀಡಾ ಪಿಂಟೋ ಈಗ ಸೋನಿಯಾ. ಇದೇನು ಫ್ರೀಡಾ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಬಯೋಗ್ರಫಿ ಸಿನಿಮಾನದಲ್ಲಿ ನಟಿಸಲಿದ್ದಾಳೆಯೇ ಎಂಬ ಅನುಮಾನ ಬೇಡ. ಏಕೆಂದರೆ ಫ್ರೀಡಾ ಮುಂದಿನ ಸಿನಿಮಾ ಹೆಸರು ಲವ್ ಸೋನಿಯಾ !. ಈ ಸೋನಿಯಾಗೂ ಆ ಸೋನಿಯಾಗೂ ಸಂಬಂಧವಿಲ್ಲ. ಸಂಬಂಧವಿರುವುದು ಸೋನಿಯಾ ಎಂಬ ಮುಗ್ಧ ಹುಡುಗಿಯ ಕಥೆಗೆ. ಭಾರತದ ಹಳ್ಳಿ ಯುವತಿಯೊಬ್ಬಳು ಪರಿಸ್ಥಿತಿಯ ಕೈಗೊಂಬೆಯಾಗಿ ವೇಶ್ಯಾವಾಟಿಕೆ ದಂಧೆಗೆ ಸಿಲುಕಿ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ.
ಸ್ಲಮ್‍ಡಾಗ್ ಮಿಲೆನಿಯರ್ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ತಬ್ರೆಜ್ ನೂರಾನಿ ಲವ್ ಸೋನಿಯಾಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಮುಂದಿನ ವರ್ಷ ಈ ಪ್ರಾಜೆಕ್ಟ್ ಶುರುವಾಗಲಿದೆ. ಅನುಪಮ್ ಖೇರ್ ಮತ್ತು ಅದಿಲ್ ಹುಸೇನ್ ನಟಿಸುತ್ತಿದ್ದಾರೆ. ಇದು ನನ್ನ ಜೀವನದ ಮತ್ತೊಂದು ಅದ್ಭುತ ಚಿತ್ರವಾಗಲಿದೆ ಎಂದು ಫ್ರೀಡಾ ಪಿಂಟೋ ಹೇಳಿದ್ದಾಳೆ.ಹಿಂದಿ ಸಿನಿಮಾಗಳಲ್ಲಿ ನಟಿಸಲು ನನಗೆ ಸಮಸ್ಯೆಯಾಗುತ್ತಿಲ್ಲ. ಈಗಾಗಲೇ ನಾನು ತೃಷ್ಣಾ ಎಂಬ ಮರಾಠಿ ಸಿನಿಮಾದಲ್ಲಿ ನಟಿಸಿದ್ದೇನೆ. ಈಗಾಗಿ ಹಿಂದಿ ಚಿತ್ರಗಳಲ್ಲಿ ಮಾತನಾಡುವುದು ನನಗೆ ಕಷ್ಟವಾಗುವುದಿಲ್ಲ. ಕೆಲವು ಸಿನಿಮಾಗಳಲ್ಲಿ ಭಾಷೆಗಿಂತ ಕಥೆ ಮತ್ತು ಪಾತ್ರವೇ ಮುಖ್ಯವಾಗುತ್ತದೆ ಎಂದು ಆಕೆ ವಿಶ್ಲೇಷಿಸುತ್ತಾಳೆ.
No comments