ಪಂಜಾಬ್ ನಭಾ ಜೈಲಿನಿಂದ ತಪ್ಪಿಸಿಕೊಂಡಿದ್ದ ಖಾಲಿಸ್ತಾನಿ ಉಗ್ರಗಾಮಿ ಹರ್ಮಿಂದರ್ ಸಿಂಗ್ ದೆಹಲಿಯಲ್ಲಿ ಮತ್ತೆ ಬಂಧನ
ಪಂಜಾಬ್ : ಪಂಜಾಬ್ ನ ನಭಾ ಜೈಲಿನಿಂದ ಆದಿತ್ಯವಾರ ತಪ್ಪಿಸಿಕೊಂಡಿದ್ದ ಖಾಲಿಸ್ತಾನ್ ವಿಮೋಚನೆ ಉಗ್ರಗಾಮಿ ಸಂಘಟನೆಯ ಉಗ್ರ ಹರ್ಮಿಂದರ್ ಸಿಂಗ್ ಮಿಂಟೂವನ್ನು ಮತ್ತೆ ದೆಹಲಿಯಲ್ಲಿ ಬಂಧಿಸಲಾಗಿದೆ.
ಆರಂಭಿಕ ವರದಿ ಪ್ರಕಾರ ಪಂಜಾಬ್ ಪೋಲೀಸರು ಹಾಗೂ ದೆಹಲಿ ಪೋಲೀಸರ ತಂಡ ಜಂಟಿ ಕಾರ್ಯಾಚರಣೆಯಲ್ಲಿ ಹರ್ಮಿಂದರ್ ಸಿಂಗ್ ಮಿಂಟೂವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹರ್ಮಿಂದರ್ ಸಿಂಗ್ ಹಾಗೂ ಇತರ ಐವರು ಖಾಲಿಸ್ತಾನಿ ಉಗ್ರರು ಆದಿತ್ಯವಾರ ಪಂಜಾಬ್ ನ ನಭಾ ಜೈಲಿನಿಂದ ತಪ್ಪಿಸಿಕೊಂಡಿದ್ದರು.
ಉಗ್ರ ಹರ್ಮಿಂದರ್ ಸಿಂಗ್ ನನ್ನು ಹಿಂದೆ 2014 ರಲ್ಲಿ ಬಂಧಿಸಲಾಗಿತ್ತು. ಪಂಜಾಬ್ ಶಿವಸೇನೆ ನಾಯಕರ ಹತ್ಯೆಗೆ ಸಂಚು,2010 ರಲ್ಲಿ ಲುದಿಯಾನದಲ್ಲಿರುವ ಭಾರತೀಯ ವಾಯುಪಡೆಯ ನಿಲ್ದಾಣದಲ್ಲಿ ಸುದಾರಿತ ಸ್ಫೋಟಕ ಸಾಧನಗಳನ್ನು ಇರಿಸಿದ ಪ್ರಕರಣ ಸೇರಿದಂತೆ ಆತನ ಹತ್ತಕ್ಕೂ ಹೆಚ್ಚು ಪ್ರಕರಣಗಳಿವೆ. ಪಾಕಿಸ್ತಾನಿ ಗುಪ್ತಚರ ಇಲಾಖೆ ISI ನೊಂದಿಗೆ ಈತನಿಗೆ ಸಂಪರ್ಕವಿತ್ತು ಅಲ್ಲದೆ ಹಲವು ಬಾರಿ ಪಾಕಿಸ್ತಾನಕ್ಕೆ ಹೋಗಿ ISI ನಿಂದ ಉಗ್ರ ತರಬೇತಿ ಪಡೆದಿದ್ದ.
No comments