ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪ್ರಾಪ್ತ ಬಾಲಕರು.
ಪುಣೆ : ಪುಣೆಯ ಚಿಂಚವಾಡ ಸ್ಲಂ ಏರಿಯಾದಲ್ಲಿ ಆರು ವರ್ಷದ ಪುಟ್ಟ ಬಾಲಕಿಯ ಮೇಲೆ ಅದೇ ಸ್ಲಂ ನ ನಾಲ್ವರು ಅಪ್ರಾಪ್ತ ಬಾಲಕರು ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಪಿಂಪ್ರಿ ಪೊಲೀಸ್ ಠಾಣೆಯ ಪೋಲೀಸರು ನಾಲ್ವರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ಶನಿವಾರ ಮಧ್ಯಾಹ್ನ 1ರ ಸುಮಾರಿಗೆ ನಡೆದಿದ್ದು, ತಂದೆ ತಾಯಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಎದುರು ಒಬ್ಬಂಟಿಯಾಗಿ ಆಟವಾಡುತ್ತಿದ್ದ ಬಾಲಕಿಯನ್ನು ಅದೇ ಸ್ಲಂ ನ ನಾಲ್ವರು ಅಪ್ರಾಪ್ತ ಬಾಲಕರು ಬಲವಂತವಾಗಿ ಅಪಹರಿಸಿ ಸ್ಥಳೀಯ ಗೋಡೌನ್ ಗೆ ಕರೆದುಕೊಂಡುಹೋಗಿ ಲೈಂಗಿಕ ದೌರ್ಜನ್ಯ ಎಸಗಿ ಅಲ್ಲಿಂದ ಪಲಾಯನವಾಗಿದ್ದರು.
ಬಾಲಕಿ ಸಂಜೆ ಮನೆಗೆ ಬಂದ ಹೆತ್ತವರಿಗೆ ವಿಷಯ ತಿಳಿಸಿದ್ದು. ತಂದೆ ಹಾಗೂ ತಾಯಿ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಪಿಂಪ್ರಿ ಪೋಲೀಸರು ನಾಲ್ವರೂ ಬಾಲಕರನ್ನು ಬಂಧಿಸಿದ್ದಾರೆ, ಬಾಲಕರ ವಯಸ್ಸು (14,13,13,10) ಆಗಿದ್ದು ರಿಮಾಂಡ್ ಹೋಂ ಗೆ ಕಳುಹಿಸಲಾಗಿದೆ..
ಬಾಲಕರ ಮೇಲೆ (IPC) section 376D (ಸಮೂಹಿಕ ಅತ್ಯಾಚಾರ), 377 (ಅನೈಸರ್ಗಿಕ ಕ್ರಿಯೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿದ್ದು ಮುಂದೆ ಕೌನ್ಸೆಲಿಂಗ್ ಕೊಡಿಸಲಾಗುವುದು ಎಂದು ಪಿಂಪ್ರಿ ಪೋಲೀಸ್ ಉಸ್ತುವಾರಿ ಮುಗ್ಲಿಕರ್ ಹೇಳಿದರು.
No comments