ಮೋದಿ ನೋಟ್ ನಿಶೇಧ ಕ್ರಮ ಬೆಂಬಲಿಸಿ ಸಿಎಂ ಸಿದ್ದರಾಮಯ್ಯ ತವರಲ್ಲೆ ಫ್ಲೆಕ್ಸ್ ಹಾಕಿ ಬೆಂಬಲ
ಮೈಸೂರು. ನ.24 : ಸಭೆ ಸಮಾರಂಭಗಳಿಗೆ, ಹುಟ್ಟು ಹಬ್ಬಕ್ಕೆ, ಶುಭ ಕಾರ್ಯಗಳಿಗೆ ಬ್ಯಾನರ್ ಹಾಕಿ ಶುಭ ಕೋರುವುದು ಸಾಮಾನ್ಯ ಆದರೆ ಮೋದಿ ಅವರ ನೋಟು ಬ್ಯಾನ್ ಮಾಡಿರುವುದು ಒಳ್ಳೆಯದು ಎಂದು ಮೋದಿ ಅವರಿಗೆ ಶುಭಾಶಯ ಕೋರಿ ನಗರದ ತುಂಬೆಲ್ಲಾ ಬ್ಯಾನರ್ ಹಾಕಿದ್ದಾರೆ. ಹಾಗಾದರೇ ಆ ನಗರ ಯಾವುದು ಎಂಬುದಕ್ಕೆ ಇಂಟರೆಸ್ಟಿಂಗ್ ಸ್ಟೋರಿ ನೋಡಿ.
ದೇಶದ್ಯಾಂತ ಹಾಗೂ ಸಂಸತ್ ನಲ್ಲಿ ನೋಟ್ ಬ್ಯಾನ್ ದೆ ಚೆರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಿಎಂ ಸ್ವಕ್ಷೇತ್ರದ ಆಡಳಿತದ ತಾಲ್ಲೂಕು ಕೇಂದ್ರದ ಟಿ.ನರಸೀಪುರದಲ್ಲಿ ಯುವಕರು ನಗರದ ತುಂಬೆಲ್ಲಾ ಮೋದಿ ಅವರು ಹಳೆಯ 500 ಮತ್ತು 1000 ಮುಖ ಬೆಲೆಯ ನೋಟುಗಳನ್ನ ಬ್ಯಾನ್ ಮಾಡುವ ಮೂಲಕ ದೇಶದಲ್ಲಿ ಕಪ್ಪು ಹಣ ನಿರ್ಮೂಲನೆ ಮಾಡಲು ಭ್ರಷ್ಟಚಾರವನ್ನ ತೊಡೆದು ಹಾಕಲು ದಿಟ್ಟ ಹೆಚ್ಚೆ ಇಟ್ಟಿದ್ದಾರೆ ಎಂದು ಫ್ಲೆಕ್ಸ್ ಹಾಕುವ ಮೂಲಕ ಮೋದಿ ಅವರ ಕೆಲಸವನ್ನ ಕೊಂಡಾಡಿದ್ದಾರೆ.
No comments