ಎನ್.ಐ.ಎ ಅಧಿಕಾರಿಗಳ ಸಮಯಪ್ರಜ್ಞೆ, ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಶಂಕಿತ ಅಲ್ ಕೈದಾ ಉಗ್ರರ ಬಂಧನ.
ಮಧುರೈ : ನಗರದ ಹಲವೆಡೆ ದಾಳಿ ನಡೆಸಿದ ಎನ್.ಐ.ಎ ಅಧಿಕಾರಿಗಳು ಮೂವರು ಶಂಕಿತ ಅಲ್-ಕೈದಾ ಉಗ್ರರನ್ನು ಆದಿತ್ಯವಾರ ಬಂದಿಸಿದ್ದಾರೆ. ಪೋಲೀಸ್ ಅಧಿಕಾರಿಗಳ ಪ್ರಕಾರ ಮೂವರೂ ಶಂಕಿತ ಉಗ್ರರು ಪ್ರಧಾನಿ ನರೇಂದ್ರ ಮೋದಿ ಸೇರಿ ಇನ್ನೂ 22 ಪ್ರಮುಖ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದರು.
ಬಂದಿಸಲಾದ ಉಗ್ರರನ್ನು ಎಮ್ ಕರೀಮ್, ಆಸೀಫ್ ಸುಲ್ತಾನ್ ಮೊಹಮ್ಮದ್ ಹಾಗು ಅಬ್ಬಾಸ್ ಅಲಿ ಎಂದು ಗುರುತಿಸಲಾಗಿದೆ. ಕರೀಂ ಅನ್ನು ಮಧುರೈ ನ ಉಸ್ಮಾನ್ ನಗರದಿಂದ, ಅಸೀಫ್ ಸುಲ್ತಾನ್ ಮೊಹಮ್ಮದ್ ಅನ್ನು ಜಿ.ಆರ್.ನಗರ್ ಹಾಗು ಅಬ್ಬಸ್ ಆಲಿ ಅನ್ನು ಇಸ್ಮೈಲ್ ಪುರಂ ನಿಂದ ಬಂದಿಸಲಾಗಿದೆ.
ಬಂದಿತರಿಂದ ಸ್ಫೋಟಕ ಸಾಮಾಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಎನ್.ಐ.ಎ ಅಧಿಕಾರಿಗಳು ದಕ್ಷಿಣ ತಮಿಳುನಾಡು ಹಾಗು ಮದುರೈ ನ ಹಲವೆಡೆ ಶಂಕಿತ ಅಲ್ ಕೈದ ಉಗ್ರರು ಕಾರ್ಯಾಚರಿಸುತ್ತಿರುವ ಖಚಿತ ಮಾಹಿತಿ ಆದರಿಸಿ ದಾಳಿ ಮಾಡಿದ್ದರು.
ಈ ಮೂವರು ದಕ್ಷಿಣ ತಮಿಳುನಾಡಿನಲ್ಲಿ ಅಲ್ ಕೈದಾ ಉಗ್ರ ಸಂಘಟನೆಯನ್ನು ಕಾರ್ಯಾಚರಿಸುತ್ತಿದ್ದರು. ದೇಶದ ಹಲವೆಡೆ ನಡೆದ ಬಾಂಬ್ ದಾಳಿಗಳಲ್ಲಿ ಇವರ ಪಾತ್ರವಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಇಬ್ಬರು ಶಂಕಿತ ಉಗ್ರರಾದ ಹಕೀಮ್ ಹಾಗು ದಾವುದ್ ಸುಲೈಮಾನ್ ನ ಬಂಧನಕ್ಕೆ ಎನ್.ಐ.ಎ ಅಧಿಕಾರಿಗಳು ಬಲೆಬೀಸಿದ್ದಾರೆ.

No comments