Breaking News

ಮಂಗಳೂರಿನಲ್ಲಿ ಸಿಸಿಬಿ ದಾಳಿ 13 ಲಕ್ಷ ಅಕ್ರಮ ಹಣ ವಶಕ್ಕೆ

ಮಂಗಳೂರಿನ  ನವಭಾರತ್ ವೃತ್ತದ ಮೌರಿಷ್ಕ  ಅಪಾರ್ಟ್‌ಮೆಂಟ್‌ನ  ಪಾರ್ಕಿಂಗ್  ಸ್ಥಳದಲ್ಲಿ   13 ಲಕ್ಷ ರೂ.ಹೊಸ ನೋಟುಗಳನ್ನು ವಿನಿಮಯಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುತ್ತೂರಿನ ಉಮರ್ ಫಾರೂಕ್  ಹಾಗೂ ಬಂಟ್ವಾಳ ಮೂಡ ಗ್ರಾಮದ ಮೊಹಮ್ಮದ್ ಬಶೀರ್ ಸಿಸಿಬಿ ಪೋಲಿಸರು ಬಲೆಗೆ ಬಿದ್ದ ಆರೋಪಿಗಳು.
ಯಾವುದೆ ದಾಖಲೆಯಿಲ್ಲದ  2,000ರೂ. ಮುಖಬೆಲೆಯ 2.5ಲಕ್ಷ ರೂ., 100, 50 ಹಾಗೂ 10 ರೂ.ಯ ಒಟ್ಟು 13 ಲಕ್ಷ ರೂ. ವಶಪಡಿಸಿ ಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್‌ ಸುನಿಲ್ ವೈ. ನಾಯಕ್, ಸಬ್ಇನ್ಸ್‌ಪೆಕ್ಟರ್‌ ಶ್ಯಾಮಸುಂದರ್ ಹಾಗೂ ಸಿಬ್ಬಂದಿ ಗಳಿದ್ದರು

No comments