ಈ ವಿಧಾನ ಬಳಸಿ, ಡಾರ್ಕ್ ಸರ್ಕಲ್ ದೂರ ಮಾಡಿ
ನಾಗಾಲೋಟದ ಜೀವನದಲ್ಲಿ ನಾವೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಒತ್ತಡದಿಂದಲೇ ಜೀವನ ನಡೆಸುತ್ತಿದ್ದೇವೆ. ಈ ಒತ್ತಡದ ಬದುಕು ನಮ್ಮ ಆರೋಗ್ಯ ಮತ್ತು ಸೌಂದರ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಕೆಲಸದ ಒತ್ತಡದಿಂದಾಗಿ ರಾತ್ರಿ ವೇಳೆ ಸರಿಯಾಗಿ ನಿದ್ರೆ ಮಾಡದಿದ್ದರೆ ಮಾನಸಿಕ ಒತ್ತಡಗಳನ್ನು ಅನುಭವಿಸುತ್ತಿದ್ದರೆ, ನಮ್ಮ ಕಣ್ಣುಗಳೇ ಇದನ್ನು ತಿಳಿಸಿಬಿಡುತ್ತವೆ.
ಕಣ್ಣುಗಳಲ್ಲಿ ಹೊಳಪು ಮಾಯವಾಗಿ ಕಣ್ಣಿನ ಸುತ್ತ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಇದರಿಂದ ಮುಖ ಕಳೆಗುಂದಿದಂತಾಗಿ, ನಿಸ್ತೇಜಕವಾಗಿ ಕಾಣುತ್ತದೆ. ಇಂತಹ ಸಮಸ್ಯೆಗಳನ್ನು ಸ್ವಾಭಾವಿಕವಾಗಿ ಹೋಗಲಾಡಿಸಲು ಚೆನ್ನಾಗಿ ನಿದ್ರೆ ಮಾಡುವುದೊಂದೇ ಮಾರ್ಗ.
ನಿದ್ರೆ ಮೂಲಕ ಮಾನಸಿಕ ಒತ್ತಡವನ್ನು ಹೊರಹಾಕಿದರೆ ಕಪ್ಪು ಕಲೆಗಳು ನಿಧಾನವಾಗಿ ಮಾಯವಾಗಿ ಮುಖದಲ್ಲಿ ಹೊಳಪು ಮೂಡುತ್ತದೆ. ಈ ಕಲೆಗಳನ್ನು ಬೇಗ ಹೋಗಲಾಡಿಸಲು ಕೆಲವೊಂದು ನೈಸರ್ಗಿಕ ಟಿಪ್ಸ್‍ಗಳು ಇಲ್ಲಿವೆ.
* ಹಾಲಿನಲ್ಲಿ ಸ್ವಲ್ಪ ಕಾಟನ್ ಅದ್ದಿ ಅದರ ಮೂಲಕ ಕಣ್ಣುಗಳನ್ನು ಮಸಾಜ್ ಮಾಡಿ ಹತ್ತು ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡುತ್ತಿದ್ದರೆ ಕಪ್ಪು ಕಲೆಗಳು ಬೇಗನೆ ಮಾಯವಾಗುವುದು.
* ನಾಲ್ಕು ಹನಿ ವಿಟಮಿನ್ ಇ ಆಯಿಲ್ ನ್ನು ಸ್ವಲ್ಪ ಕೋಲ್ಡ್ ವಾಟರ್‍ಗೆ ಹಾಕಿ ಅದರಲ್ಲಿ ಕಾಟನ್ ಅದ್ದಿ ಅದರಿಂದ ಕಣ್ಣನ್ನು ಒರೆಸಿ ಈ ರೀತಿ ಪ್ರತಿ ದಿನ ಮಾಡಿದರೆ ಕಣ್ಣಿನ ಕಪ್ಪು ಕಲೆಗಳು ಮಾಯವಾಗುವುದು.
* ಸೌತೆಕಾಯಿ ಕತ್ತರಿಸಿ ಕಣ್ಣಿನ ಮೇಲೆ ಇಟ್ಟು 10 ನಿಮಿಷಗಳ ಕಾಲ ವಿಶ್ರಾಂತಿ ತೆಗೆದುಕೊಂಡು ನಂತರ ಮುಖ ತೊಳೆದರೆ ಕಣ್ಣಿನ ಸುತ್ತ ಕಲೆ ಹೋಗಲಾಡಿಸಿ ಕಣ್ಣನ್ನು ಶುಭ್ರವಾಗಿಡುತ್ತದೆ.
* ಗ್ರೀನ್‍ಟೀ ಪೌಡರ್‍ನ್ನು ತಣ್ಣೀರಿನಲ್ಲಿ ನೆನೆಸಿ ನಂತರ ಅದನ್ನು ಒಂದು ಶುಭ್ರವಾದ ಬಟ್ಟೆಯಲ್ಲಿ ಕಟ್ಟಿ ಕಣ್ಣಿನ ಮೇಲಿಟ್ಟುಕೊಂಡರೆ ಕಣ್ಣಿನ ಸುತ್ತ ಕಲೆಗಳು ದೂರಾಗುತ್ತವೆ.
* ಮೊಟ್ಟೆಯ ಬಿಳಿ ಭಾಗವನ್ನು ಮುಖಕ್ಕೆ ಹಚ್ಚಿ ಅದು ಒಣಗಿದ ಬಳಿಕ ಒದ್ದೆ ಬಟ್ಟೆಯಿಂದ ಒರೆಸಿ ನಂತರ ಮುಖವನ್ನು ತೊಳೆದರೆ ಮುಖದ ಕಾಂತಿ ಹೆಚ್ಚಾಗುತ್ತದೆ.
No comments