Breaking News

ಮರಣೋತ್ತರ ಪರೀಕ್ಷೆ ತಿರುಚಿದ ಸಿದ್ದರಾಮಯ್ಯ : ಡಿಕೆ ರವಿ ತಾಯಿ ಗೌರಮ್ಮ


ಡಿಕೆ ರವಿ ಅನುಮಾನಾಸ್ಪದ  ಸಾವು  ಸಿಬಿಐ ವರಧಿ ಸಂಪೂರ್ಣ ಸುಳ್ಳು,
ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು
ದೊಡ್ಡಕೊಪ್ಪಲು ದಕ್ಷ ಪೊಲೀಸ್ ಅಧಿಕಾರಿ ಡಿಕೆ ರವಿ ಅವರ  ಅವರ ಅನುಮಾನಾಸ್ಪದ ಸಾವನ್ನು ತನಿಖೆ ನಡೆಸಿದ ಸಿಬಿಐ ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಮಾಡಿದೆ ಈ ಹಿನ್ನಲೆಯಲ್ಲಿ ಡಿಕೆ ರವಿ ತಾಯಿ ಗೌರಮ್ಮ ಕರ್ನಾಟಕ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ,ಸಿಬಿಐ ತನಿಖೆಯಲ್ಲಿ ಹುರುಳಿಲ್ಲ ,ಸಿದ್ದರಾಮಯ್ಯನವರು ಮರಣೋತ್ತರ ಪರೀಕ್ಷೆಯನ್ನು ತಿರುಚಲು ವೈದ್ಯರಿಗೆ ಆಮಿಷ ಒಡ್ಡಿದ್ದಾರೆ ಎಂಬ ಗಂಭೀರ ಆರೋಪವನ್ನು ಗೌರಮ್ಮ ಮಾಡಿದ್ದಾರೆ ,ಮತ್ತು ಡಿಕೆ ರವಿ ಅವರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ , 
ರವಿ ಸಾವು ಅವರ ಅನುಮಾನಾಸ್ಪದ ಸಾವು ಪ್ರಕರಣದ ಅಂತಿಮ ತನಿಖೆ ಪೂರ್ಣ ಗೊಳಿಸಿ ಈ ಹಿಂದೆ ಸಿಐಡಿಯ ತನಿಖಾ ವರಧಿಯಲ್ಲಿ ಹೇಳಿರುವಂತೆಯೇ ಸಿಬಿಐ ಕೂಡ ಅದೇ ದಾಟಿಯ ತನಿಖಾ ವರದಿ  ಸಲ್ಲಿಸಿದೆ ,ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅವರ ಸಾವಿನ ಹಿಂದೆ ಯಾವುದೇ ಅಪರಾಧ ಉದ್ದೇಶ ಕಂಡು ಬಂದಿಲ್ಲ ಎಂದು ಸಿಬಿಐ ವರದಿ ಹೇಳಿದೆ ಎಂದು ತಿಳಿದು ಬಂದಿದೆ 

No comments