ಪಿಟ್ಟೋಯೀ ಜಗತ್ತಿನ ಅತ್ಯಂತ ವಿಷಕಾರಿ ಪಕ್ಷಿ
ವಿಷ ಎಂಬ ಪದ ಕೇಳಿದಾಕ್ಷಣ ನಮಗೆ ನೆನೆಪಾಗುವ ಮೊದಲ ಪ್ರಾಣಿ ಸರ್ಪ. ಆದರೆ ವಿಷ ಎಂಬುದು ಸರ್ಪಕ್ಕೆ ಮಾತ್ರ ಸೀಮಿವಾಗಿಲ್ಲ. ಈ ಜೀವಜಗತ್ತಿನ ವಿಸ್ಮಯದಲ್ಲಿ ಅನೇಕ ಅಚ್ಚರಿಯ ಸಂಗತಿಗಳೂ ಇವೆ. ನ್ಯೂ ಗಿನಿ ದೇಶದಲ್ಲಿ ಕಂಡುಬರುವ ಪಿಟ್ಟೋಯೀ ಅತ್ಯಂತ ವಿಷಕಾರಿ ಪಕ್ಷಿ ಎಂದೇ ಗುರುತಿಸಲ್ಪಟ್ಟಿದೆ. ಇದರ ಚರ್ಮ ಮತ್ತು ಗರಿಗಳು ಅತ್ಯಂತ ವಿಷಕಾರಿ.
ಪಿಟ್ಟೋಯೀ ಪ್ರಬೇಧದ ಪಕ್ಷಿಗಳಲ್ಲಿ ಹೂಡೆಡ್ ಪಿಟ್ಟೋಯಿ ಪ್ರಬಲ ನಂಜು ಹೊಂದಿದೆ. ಇದರ ಚರ್ಮ ಮತ್ತು ಪುಕ್ಕಗಳು ನ್ಯೂಟ್ರೋಟಾಕ್ಸಿಕ್ ಆಲ್ಕಲಾಯ್ಡ್ ಎಂಬ ವಿಷಯುಕ್ತ ರಾಸಾಯನಿಕ ಹೊಂದಿದೆ. ಹಾವುಗಳು ಮತ್ತಿತ್ತರ ಅಪಾಯಕಾರಿ ಪ್ರಾಣಿಗಳೇ ಪಿಟ್ಟೋಯೀಯನ್ನು ನೋಡಿದರೆ ಹೆದರುತ್ತವೆ. ಈ ಪುಟ್ಟ ಪಿಟ್ಟೋಯೀಯಲ್ಲಿ ದೊಡ್ಡ ಪ್ರಮಾಣದ ವಿಷ ಇರುವುದು ಪ್ರಕೃತಿಯ ವಿಸ್ಮಯವಲ್ಲದೇ ಮತ್ತೇನು ?
No comments