ವಿಶ್ವದ ಅತಿ ಚಿಕ್ಕ ರೈಲು, ‘ಏಂಜೆಲ್ಸ್ ಫ್ಲೈಟ್’
ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್‍ನಲ್ಲಿರುವ ಈ ಪುಟ್ಟ ರೈಲಿನ ಹೆಸರು ಏಂಜೆಲ್ಸ್ ಫ್ಲೈಟ್. ಈ ರೈಲಿನಲ್ಲಿ ಈವರೆಗೆ 10 ಕೋಟಿಗೂ ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ ಎಂದರೆ ನಿಮಗೆ ಆಚ್ಚರಿಯಾಗಬಹುದು. ವಿಶ್ವದ ಅತ್ಯಂತ ಪುಟ್ಟ ರೈಲು ಎಂಬ ಹೆಗ್ಗಳಿಕೆ ಪಡೆದಿರುವ ಇದು ಕಳೆದ 50 ವರ್ಷಗಳಿಂದಲೂ ಚಾಲನೆಯಲ್ಲಿದೆ.
ಈ ಸ್ವಯಂಚಾಲಿತ ರೈಲು ವೇಗ ಮತ್ತು ಅಗಾಧ ಸಾಮಥ್ರ್ಯಕ್ಕೆ ಸಾಕ್ಷಿಯಾಗಿದೆ. ಸಿನಾಯ್‍ನಿಂದ ಅತ್ಯಂತ ಇಳಿಜರಾಗಿ ರುವ ಅಲಿವೆಟ್ ಎಂಬ ಸ್ಥಳಕ್ಕೆ ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 10ರವರೆಗೆ ನಿರಂತವಾಗಿ ಸಂಚರಿಸುತ್ತದೆ. ಐದು ದಶಕದ ಅವಧಿಯಲ್ಲಿ ಇಷ್ಟು ಸಂಖ್ಯೆಯ ಜನರು ಬೇರಾವುದೇ ರೈಲಿನಲ್ಲಿ ಪ್ರಯಾಣಿಸಿಲ್ಲ ಎಂಬುದು ಏಂಜೆಲ್ಸ್ ಫ್ಲೈಟ್‍ನ ಮತ್ತೊಂದು ಹೆಗ್ಗಳಿಕೆ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತು ಈ ರೈಲಿಗೂ ಅನ್ವಯಿಸುತ್ತದೆ.
No comments