ಸಿಂದೂ ನದಿ ಭಾರತದ ಹಕ್ಕು, ಆ ನೀರು ಭಾರತದ ರೈತರಿಗೆ ಸೇರಿದ್ದು - ನರೇಂದ್ರ ಮೋದಿ
ಪಂಜಾಬ್ : ಭಾರತ ಮತ್ತು ಪಾಕಿಸ್ತಾನ ಮಧ್ಯೆ ಇರುವ ಸಿಂಧೂ ನದಿ ನೀರಿನ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಬದಲಾವಣೆ ತರುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಇಂದು ಪಂಜಾಬ್ ನಲ್ಲಿ ರ್ಯಾಲಿಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಿಂದೂ ನದಿ ಭಾರತದ ಹಕ್ಕು, ಆ ನೀರು ಭಾರತದ ರೈತರಿಗೆ ಸೇರಿದ್ದು, ಭಾರತದಿಂದ ಪಾಕಿಸ್ತಾನ ಮೂಲಕ ಹಾದು ಅದು ಸಮುದ್ರ ಸೇರುತ್ತೆ. ಆ ನೀರಿನ್ನು ನಮ್ಮ ರೈತರಿಗೆ ಉಪಯೋಗವಾಗುವಂತೆ ಮಾಡಲು ನಾನು ಎಂತಹ ನಿರ್ಧಾರ ತೆಗೆದುಕೊಳ್ಳಲು ಸಿದ್ದ ಎಂದರು.
1960 ರಲ್ಲಿ ವಿಶ್ವಸಂಸ್ಥೆ ನೇತೃತ್ವದಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಹರಿಯುವ 6 ನದಿಗಳ ನೀರು ಹಂಚಿಕೆ ಬಗ್ಗೆ ಒಪ್ಪಂದ ಮಾಡಲಾಗಿತ್ತು. ಆದರೆ ಭಾರತದ ಸೇನೆಯ ವಿರುದ್ಧ ಪಾಕಿಸ್ತಾನದ ಉಗ್ರರು ಉರಿಯಲ್ಲಿ ದಾಳಿ ಮಾಡಿ 19 ಭಾರತೀಯ ಸೈನಿಕರನ್ನು ಕೊಂದ ನಂತರ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವುಗಳನ್ನು ತಳೆಯುವ ಬಗ್ಗೆ ಮಾತನಾಡಿದ್ದರು, ಅದರಲ್ಲಿ ಸಿಂಧು ನದಿ ನೀರು ಹಂಚಿಕೆ ವಿಚಾರವೂ ಒಂದು.
No comments