ಭಾರತ್ ಬಂದ್‌ಗೆ ನಮ್ಮ ಬೆಂಬಲವಿಲ್ಲ, ನಮ್ಮ ಊರಿನಲ್ಲಿ ಭ್ರಷ್ಟರೂ ಇಲ್ಲ !
ಕುಂದಾಪುರ, ಐನೂರು ಮತ್ತು ಸಾವಿರ ರೂಪಾಯಿಯ ನೋಟ್ ಬ್ಯಾನ್ ಮಾಡಿದ ಕ್ರಮವನ್ನು ವಿರೋಧಿಸಿ ಟಿಎಂಸಿ ನೇತೃತ್ವದಲ್ಲಿ ವಿರೋಧ ಪಕ್ಷಗಳು ಭಾರತ್ ಬಂದ್‌ಗೆ ಕರೆ ಕೊಟ್ಟಿದ್ದವು ,
ಈ ಹಿನ್ನಲೆಯಲ್ಲಿ ಕುಂದಾಪುರದ ಗ್ರಾಮಸ್ಥರು ಹಾಕಿದ ಬ್ಯಾನರ್ ಬಹಳ ಸಂಚಲನ ಮೂಡಿಸಿದೆ , ‘ಭಾರತ್ ಬಂದ್‌ಗೆ ನಮ್ಮ ಬೆಂಬಲವಿಲ್ಲ, ನಮ್ಮ ಊರಿನಲ್ಲಿ ಭ್ರಷ್ಟರೂ ಇಲ್ಲ, ಕಪ್ಪು ಹಣವೂ ಇಲ್ಲ. ನಮ್ಮ ತಾತ್ಕಾಲಿಕ, ವೈಯಕ್ತಿಕ ಸಮಸ್ಯೆಗಳನ್ನು ಮೀರಿ ಭಯೋತ್ಪಾದನೆ, ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಕೇಂದ್ರ ಸರಕಾರದ ಹೋರಾಟದಲ್ಲಿ ನಾವೂ ಕೈಜೋಡಿಸುತ್ತೇವೆ’ ಎಂದು ನ.೨೮ರ ಭಾರತ್ ಬಂದ್ ವಿರೋಧಿಸಿ ಬಸ್ರೂರಿನ ಗ್ರಾಮಸ್ಥರು ಬ್ಯಾನರ್ ಬರೆಸಿ ಹಾಕುವ ಮೂಲಕ ಪ್ರಧಾನಿ ಮೋದಿ ಪರವಹಿಸಿ ನಿಂತಿದ್ದಾರೆ ಎಂದು ತಿಳಿದು ಬಂದಿದೆ
No comments