ನೋಟು ನಿಶೇದಕ್ಕೆ ವಿರೋಧ - ದಿಲ್ಲಿ ಜನರಿಂದ ರಾಹುಲ್ ಗಾಂಧಿ, ಕೇಜ್ರಿವಾಲ್ ಪ್ರತಿಕೃತಿ ದಹನ
ದೆಹಲಿ : ರಾಷ್ಟ್ರವಾದಿ ಶಿವಸೇನೆ / ಯುನೈಟೆಡ್ ಹಿಂದೂ ಪ್ರಂಟ್ ನಿನ್ನೆ ದೆಹಲಿಯ ಶಾಸ್ತ್ರೀ ಪಾರ್ಕ್ ನ ಮುಖ್ಯ ಕೆಂಪು ದ್ವೀಪದ ಬಳಿ, ಕೇಂದ್ರ ಸರ್ಕಾರ ಹಳೆಯ 500 ಹಾಗೂ 1000 ದ ನೋಟು ನಿಶೇಧ ಮಾಡಿರುವ ಕ್ರಮವನ್ನು ವಿರೋಧಿಸುತ್ತಿರುವ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಕೇಜ್ರಿವಾಲ್ ಹಾಗೂ ಮಾಯಾವತಿ ಆಕೃತಿಗಳನ್ನು ದಹಿಸಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ವಿರುದ್ಧ ನೆರೆದಿದ್ದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ದೆಹಲಿಯ ಜನರನ್ನು ಮೂರ್ಖರನ್ನಾಗಿ ಮಾಡಿ ಇಲ್ಲಿ ಅಧಿಕಾರ ವಹಿಸಿದ ಕೇಜ್ರಿವಾಲ್ ನಂತರ ಭ್ರಷ್ಟಾಚಾರಗಳ ಮೂಲಕ ಕೋಟಿ ಕೋಟಿ ಹಣ ಸಂಪಾದಿಸಿದರು. ಈಗ ನೋಟು ನೀಶೇಧದಿಂದ ಆ ಹಣವನ್ನು ಉಪಯೋಗಿಸಲಾಗದೆ ಪರದಾಡುತ್ತಿದ್ದಾರೆ ಹಾಗಾಗಿ ನೋಟು ನಿಶೇಧದನ್ನು ವಿರೋಧಿಸುತ್ತಿದ್ದಾರೆ. ಈಗ ದೊಡ್ಡ ದೊಡ್ಡ ಜಾಹೀರಾತು ನೀಡಿ ಪಂಜಾಬ್ ನ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ ಎಂದು ರಾಷ್ಟ್ರವಾದಿ ಶಿವಸೇನ ರಾಷ್ಟ್ರೀಯ ಅಧ್ಯಕ್ಷ ಶ್ರೀ ಜಯ್ ಭಗವಾನ್ ಗೋಯಲ್ ಹೇಳಿದರು.
ನೋಟ್ ಬಂದ್ ನಂತರ ದೇಶಾದ್ಯಂತ ಅತೀ ಹೆಚ್ಚು ಜನ ಮೋದಿ ಪರ ನಿಂತಿದ್ದಾರೆ. ಆದರೆ ವಿರೋಧ ಪಕ್ಷಗಳು ಜನರನ್ನು ಕೇಂದ್ರ ಸರ್ಕಾರದ ವಿರುದ್ಧ ನಿಲ್ಲಲು ಪ್ರೇರೇಪಿಸುತ್ತಿದೆ ಎಂದರು.
No comments