Breaking News

ಪ್ರಧಾನಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ - ಬಿಜೆಪಿ



ನವದೆಹಲಿ : ತಾವು ಕಪ್ಪು ಹಣ ಬೆಂಬಲಿಸುತ್ತಿದ್ದೇವೆ ಎಂದು ತಮ್ಮ ಮೇಲೆ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟೀಕೆಗಳಿಗೆ ಕ್ಷಮೆ ಕೇಳಬೇಕೆಂದು ಇಂದು ವಿರೋಧ ಪಕ್ಷಗಳು ಸದನದಲ್ಲಿ ಕೋಲಾಹಲ ಎಬ್ಬಿಸಿದರು. ಇದರಿಂದಾಗಿ ಚಳಿಗಾಲದ ಎರಡನೇ ದಿನದ ಅಧಿವೇಶನವೂ ಅಸ್ತವ್ಯಸ್ತವಾಯಿತು.ಆದರೆ ಕೇಂದ್ರ ಸರ್ಕಾರ ಈ ಮನವಿಯನ್ನು ತಿರಸ್ಕರಿಸಿದೆ.

500 ಹಾಗೂ 1000 ಮುಖಬೆಲೆಯ ನೋಟುಗಳನ್ನು ನಿಶೇಧಿಸಿದ್ದನ್ನು ಟೀಕಿಸುತ್ತಿರುವ ವಿರೋಧಪಕ್ಷಗಳ ಬಗ್ಗೆ ಇಂದು ಬೆಳಗ್ಗೆ ದೆಹಲಿಯ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಾ "ಕೆಲವರು ನೋಟು ನಿಶೇಧವನ್ನು ವಿರೋಧಿಸುತ್ತಿದ್ದಾರೆ, ಅವರಿಗೆ ತೊಂದರೆ ಆಗಿರುವುದು ನಮ್ಮ ತಯಾರಿಯಿಂದಲ್ಲ, ಅವರಿಗೆ ತೊಂದರೆ ಆಗಿರುವುದು ಅವರಿಗೆ ತಯಾರಾಗಲು ಸಮಯ ಸಿಕ್ಕಿಲ್ಲ ಎಂಬ ಕಾರಣದಿಂದ" ಎಂದಿದ್ದರು.

ಜೊತೆಗೆ ಕಪ್ಪು ಹಣ ಹಾಗೂ ನಕಲಿ ನೋಟು ಚಲಾವಣೆ ನಿಲ್ಲಿಸಲು ಹೆಚ್ಚು ಬೆಲೆಯ ನೋಟು ನಿಶೇಧ ಅನಿವಾರ್ಯವಾಗಿತ್ತು, ಅಲ್ಲದೆ ಅದನ್ನು ತುಂಬಾ ಗುಪ್ತವಾಗಿ ಮಾಡುವ ಅವಶ್ಯಕತೆಯೂ ಇತ್ತು. ಯಾಕೆಂದರೆ ಕಪ್ಪು ಹಣ ಹೊಂದಿರುವವರಿಗೆ ಅದನ್ನು ಬದಲಾಯಿಸಲು ಸಮಯವನ್ನು ನೀಡದೆ ಇರುವುದು ಮುಖ್ಯ ಉದ್ದೇಶವಾಗಿತ್ತು ಎಂದಿದ್ದರು.

ಮೋದಿ ಇಂದು ವಿರೋಧಪಕ್ಷ ಗಳು ಕಪ್ಪು ಹಣವನ್ನು ಬೆಂಬಲಿಸುತ್ತಿದ್ದಾರೆ ಎಂದಿರೋದು ತಪ್ಪು, ಎಲ್ಲಾ ವಿರೋಧ ಪಕ್ಷಗಳಿಗೂ ಇದೊಂದು ತುಂಬಾ ಗಂಭೀರ ವಿಚಾರವಾಗಿದೆ ಹಾಗಾಗಿ ಮೋದಿ ಕ್ಷಮೆ ಕೇಳಲೇ ಬೇಕು ಎಂದು ಕಾಂಗ್ರೆಸ್ ನಾಯಕ ಗುಲಾಂ ನಬೀ ಆಜಾದ್ ಸದನದಲ್ಲಿ ಹೇಳಿದರು.

ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ರಾಜ್ಯ ಸಭೆಯಲ್ಲಿ ಮಾತನಾಡುತ್ತ " ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರೋಧ ಪಕ್ಷಗಳ ಬಳಿ ಕಪ್ಪು ಹಣವಿದೆ ಎಂಬ ತಪ್ಪು ಹೇಳಿಕೆ ಕೊಟ್ಟಿದ್ದಾರೆ. ಇದಕ್ಕಾಗಿ ಪ್ರಧಾನಿ ಇಲ್ಲಿಗೆ ಬಂದು ಕ್ಷಮೆ ಕೇಳಬೇಕು ಎಂದು ಸದನದ ಬಾವಿಗಿಳಿದು ಪ್ರತಿಭಟಿಸಿದರು.

ಆದರೆ ಬಿಜೆಪಿ ನಾಯಕ ಮುಖ್ತರ್ ಅಬ್ಬಾಸ್ ನಖ್ವಿ ರಾಜ್ಯ ಸಭೆಯಲ್ಲಿ ಮಾತನಾಡುತ್ತಾ ನರೆಂದ್ರ ಮೋದಿ ವಿರೋಧ ಪಕ್ಷಗಳ ಬಳಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದರು.

ಲೋಕ ಸಭೆಯಲ್ಲಿ ಕೂಡ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳ ವಿರುದ್ಧ ಕೊಟ್ಟಿರುವ ಹೇಳಿಕೆ ಕುರಿತು ಪ್ರತಿಭಟನೆ ನಡೆಯಿತು.

No comments