ಪಾಕಿಸ್ತಾನದಲ್ಲಿ ಕ್ವಿಂದಿಲ್ ಬಲೋಚ್ ನಂತರ ಈಗ ಮತ್ತೊಬ್ಬ ಚಿತ್ರ ನಟಿಯ ಹತ್ಯೆ.
ಪಾಕಿಸ್ತಾನ : ಕ್ವಿಂದಿಲ್ ಬಲೋಚ್ ನಂತರ ಈಗ ಮತ್ತೊಬ್ಬ ಚಿತ್ರ ನಟಿಯ ಹತ್ಯೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್ ನಲ್ಲಿ ಈ ಘಟನೆ ಜರುಗಿದೆ.
ಚಿತ್ರ ನಟಿ ಕಿಸ್ಮತ್ ಬೇಗ್ ಹತ್ಯೆಯಾದವಳು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಕಾರಿನಲ್ಲಿ ತನ್ನ ಮನೆಗೆ ಮರಳುತ್ತಿದ್ದ ಸಮಯದಲ್ಲಿ ಈ ಹತ್ಯೆ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಬಂದೂಕುದಾರಿ ನಟಿ ತೆರಳುತ್ತಿದ್ದ ವಾಹವನ್ನು ಅಡ್ಡಕಟ್ಟಿ ಆಕೆಯ ಕಾರ್ ಮೇಲೆ ಹನ್ನೊಂದು ಬಾರಿ ಗುಂಡು ಚಲಾಯಿಸಿದ್ದಾನೆ. ಗುಂಡು ಆಕೆಯ ಹೊಟ್ಟೆ, ಕಾಲು ಹಾಗೂ ಕೈ ಒಳಹೊಕ್ಕಿದೆ.
ಸ್ಥಳೀಯರು ನಟಿ ಹಾಗೂ ಕಾರು ಚಾಲಕನನ್ನು ಆಸ್ಪತ್ರೆಗೆ ಕೊಂಡೊಯ್ದರು ನಟಿ ಅತಿಯಾದ ರಕ್ತ ಸ್ರಾವದಿಂದ ಮೃತಪಟ್ಟಿದ್ದಾಳೆ. ಕಾರು ಚಾಲಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾನೆ. ನಟಿಯ ಹತ್ಯೆಗೆ ಕಾರಣ ಏನೆಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
No comments