Breaking News

ಶಿಕ್ಷಕನ ಸಮಸ್ಯೆಗೆ ಅಲ್ಪ ಸಮಯದಲ್ಲೇ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ.

ಕರ್ನಾಟಕ :  ಪ್ರಧಾನಿ ಕಾರ್ಯಾಲಯದ ಕಾರ್ಯವೈಖರಿ ಮತ್ತೊಮ್ಮೆ ಪ್ರಶಂಸೆಗೆ ಕಾರಣವಾಗಿದೆ, ಕೇಂದ್ರ ಸರ್ಕಾ. ನಡೆಸುವ ಶಿಕ್ಷಕ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಅಂಕ ಪಟ್ಟಿ ಪರಿಶೀಲನೆಯಲ್ಲಿನ ತೊಂದರೆಯಿಂದಾಗಿ ಹಲವು ತಿಂಗಳಿನಿಂದ ವೇತನ ಸಿಗದೆ ಪರದಾಡುತ್ತಿದ್ದ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರಿಗೆ ಪ್ರಧಾನಿ ಕಾರ್ಯಾಲಯ ಸಹಾಯ ಮಾಡಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು, ಕೆ ಸಿದ್ದರಟ್ಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿರುವ ಸಿದ್ದೇಶ್‌ ಪ್ರಧಾನಿ ಕಾರ್ಯಾಲಯದ  ನೆರವಿನಿಂದ ಸಂಬಳ ಪಡೆದ ಶಿಕ್ಷಕ.

ಶಿಕ್ಷಕರ ನೇಮಕಾತಿಗಾಗಿ ಕೇಂದ್ರ ಸರ್ಕಾರ ನಡೆಸುವ ಸಿಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಸಿದ್ದೇಶ್‌ ಇದೇ ಅರ್ಹತೆ ಆಧಾರದ ಮೇಲೆ ಸಿದ್ದರಟ್ಟಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಫೆಬ್ರವರಿಯಲ್ಲಿ ಸೇವೆಗೆ ನೇಮಕಗೊಂಡಿದ್ದರು. ಆದರೆ, ಸಿದ್ದೇಶ್‌ ಅವರ ಅಂಕಪಟ್ಟಿಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಪರಿಶೀಲಿಸಿರಲಿಲ್ಲ.ಇದೇ ಕಾರಣದಿಂದಾಗಿ ರಾಜ್ಯ ಸರಕಾರ ಅವರ ಸಂಬಳ ತಡೆಹಿಡಿದಿತ್ತು.ವೇತನವಿಲ್ಲದೆ ಪರದಾಡುತ್ತಿದ್ದ ಶಿಕ್ಷಕ ಸಿದ್ದೇಶ್ ಕೇಂದ್ರೀಯ ಶಿಕ್ಷಣ ಮಂಡಳಿಗೆ ಹಲವು ಸಲ ಪತ್ರಬರೆದರು ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕಾರಣದಿಂದಾಗಿ ಸ್ನೇಹಿತರ ನೆರವಿನೊಂದಿಗೆ ಪ್ರಧಾನಿ ವಿಳಾಸಕ್ಕೆ ಪತ್ರ ಬರೆದಿದ್ದರು. ಇದಕ್ಕೆ ತಕ್ಷಣಕ್ಕೆ ಸ್ಪಂದಿಸಿದ ಪ್ರಧಾನ ಮಂತ್ರಿಗಳ ಕಾರ್ಯಾಲಯ, ಸಿದ್ದೇಶ್‌ ಅವರ ಅಂಕಪಟ್ಟಿಯನ್ನು ಕೂಡಲೇ ಪರಿಶೀಲಿಸಿ ಕಳುಹಿಸುವಂತೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ ಸೂಚನೆ ನೀಡಿತು.

ತ್ವರಿತ ಪ್ರತಿಕ್ರಿಯೆ ಬಳಿಕ ಕ್ರಿಯಾಶೀಲಗೊಂಡ ಪ್ರೌಢ ಶಿಕ್ಷಣ ಮಂಡಳಿ, ಪ್ರಧಾನಿ ಕಾರ್ಯಾಲಯದಿಂದ ತನಗೆ ಪತ್ರ ತಲುಪಿದ ಹದಿನೈದೇ ದಿನಗಳಲ್ಲಿ ಸಿದ್ದೇಶ್‌ ಅವರ ದಾಖಲೆಗಳನ್ನು ಪರಿಶೀಲಿಸಿ, ಮಾನ್ಯ ಮಾಡಿದೆ.ಈಗ ರಾಜ್ಯ ಸರಕಾರ ತಡೆಹಿಡಿದಿದ್ದ ಶಿಕ್ಷಕ ಸಿದ್ದೇಶ್ ವೇತವನ್ನು ಬಿಡುಗಡೆಗೊಳಿಸಿದೆ . ಇದೇ ರೀತಿ ಸಮಸ್ಯೆ ಎದುರಿಸುತ್ತಿದ್ದ ಬೇರೆ ರಾಜ್ಯಗಳ ಇನ್ನೂ ಐವರು ಶಿಕ್ಷಕರ ಸಮಸ್ಯೆಗೂ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಪರಿಹಾರ ದೊರೆತಿದೆ.

No comments