Breaking News

ನಗರೋಟಾದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ:ಹುತಾತ್ಮರಾದ ಮೂವರು ಯೋಧರು

ಜಮ್ಮು ಕಾಶ್ಮೀರ : ಮಂಗಳವಾರ ಬೆಳಗ್ಗೆ 5:30ರ ವೇಳೆಯಲ್ಲಿ ಶಸ್ತ್ರ ಸಜ್ಜಿತ ಉಗ್ರರು ನಗರೋಟಾದ ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ . ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಸಹ ತಕ್ಕ ಪ್ರತ್ಯುತ್ತರ ನೀಡಿದ್ದು, ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. ಸದ್ಯ ಮೂಲಗಳ ಪ್ರಕಾರ ಮೂವರು ಸೂಸೈಡ್ ಬಾಂಬರ್'ಗಳು ಈ ದಾಳಿ ನಡೆಸಿದ್ದು, ಇನ್ನೋರ್ವ ಉಗ್ರ ಉಳಿದುಕೊಂಡಿರುವ ಶಂಕೆ ಇದೆ.ಇದೀಗ ಸೇನಾ ಕಾರ್ಯಾಚರಣೆ ಮುಂದುವರಿದಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ .


No comments