Breaking News

ನೈಜಿರಿಯಾದ ಪ್ರಜೆಯೊಬ್ಬನ ಬಳಿ 54ಲಕ್ಷ ಮೌಲ್ಯದ ಹೊಸ ನೋಟುಗಳು ಪತ್ತೆ.

ನವದೆಹಲಿ : ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೈಜಿರಿಯಾದ ಪ್ರಜೆಯೊಬ್ಬನ ಬಳಿ 54ಲಕ್ಷ ಮೌಲ್ಯದ ಹೊಸ ನೋಟುಗಳು ಪತ್ತೆಯಾಗಿದೆ. 
ನೈಜಿರಿಯಾ ಮೂಲದ ತೊಚುಕ್ವೋ ಚಿಜಿಯೋಕೆ ಎಂಬಾತ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಯಂಬತೂರಿಗೆ ಪ್ರಯಾಣ ಬೆಳೆಸಲು ಬಂದಿದ್ದ ವೇಳೆ ತಪಾಸಣೆ ನಡೆಸಿದ ಸಿಐಎಸ್ಎಫ್ ಅಧಿಕಾರಿಗಳಿಗೆ ಆತನ ಬಳಿ 58 ಲಕ್ಷ ಮೊತ್ತದ ಹಣ ಪತ್ತೆಯಾಗಿದೆ.
ಈ ಬಗ್ಗೆ ಮಾತನಾಡಿದ ವಿಮಾನ ನಿಲ್ದಾಣ ಅಧಿಕಾರಿ "ಆತನ ಬಳಿ ಪತ್ತೆಯಾದ 58ಲಕ್ಷಗಳಲ್ಲಿ, 54ಲಕ್ಷ ಮೌಲ್ಯದ ಹೊಸ ನೋಟು ಹಾಗೂ 4ಲಕ್ಷ ಮೌಲ್ಯದ ಹಳೆಯ ನೋಟುಗಳು ಇದ್ದವು. ಆತನ ಬಗ್ಗೆ ಕೊಯಂಬತ್ತೂರಿನ ಎಐಯು ಹಾಗೂ ಕಸ್ಟಮ್ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ ನಂತರ ಆತನಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಲು ಅವಕಾಶ ನೀಡಲಾಗಿದೆ. ಆತ ಕೊಯಂಬತ್ತೂರಿಗೆ ತಲುಪಿದ ನಂತರ ಆತನನ್ನು ಎಐಯು ಹಾಗೂ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದು ಆತನಲ್ಲಿರುವ ಹಣದ ಮೂಲದ ಬಗ್ಗೆ ತನಿಖೆ ನಡೆಸಲಿದ್ದಾರೆ" ಎಂದರು.
ಕೇಂದ್ರ ಸರ್ಕಾರ ಹಳೆಯ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ನಿಶೇಧ ಮಾಡಿದ ನಂತರ ದೇಶದ ಮೂಲೆ ಮೂಲೆಗಳಿಂದ ಅಕ್ರಮವಾಗಿ ಕೂಡಿಟ್ಟ ಕೋಟ್ಯಾಂತರ ಮೌಲ್ಯದ ಹೊಸ ಹಾಗೂ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

No comments