ಬಿಎಸ್‍ವೈಗೆ ಕ್ಲೀನ್ ಚಿಟ್ : ಅಕ್ರಮ ಆಸ್ತಿ ಪ್ರಕರಣದ 3 ಅರ್ಜಿಗಳು ವಜಾ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಯಡಿಯೂರಪ್ಪ ವಿರುದ್ದ ವಕೀಲ ವಿನೋದ್ ಅವರು ಸಲ್ಲಿಸಿದ್ದ ಅಕ್ರಮ ಆಸ್ತಿ ಪ್ರಕರಣದ ಮೂರು ಅರ್ಜಿಗಳನ್ನು ಶಿವಮೊಗ್ಗ ಲೋಕಾ ನ್ಯಾಯಾಲಯ ವಜಾಗೊಳಿಸಿದೆ. ಕಳೆದ 2010ರಲ್ಲಿ ಬಿಎಸ್‍ವೈ ವಿರುದ್ಧ ಅಕ್ರಮ ಆಸ್ತಿ ಕುರಿತಂತೆ ಪ್ರಕರಣ ದಾಖಲಾಗಿದ್ದವು. ಸುದೀರ್ಘ ವಿಚಾರಣೆ ನಂತರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ನ್ಯಾಯಾಲಯ ಪರಿಗಣಿಸಿ ಅರ್ಜಿದಾರರ ದೂರನ್ನು ವಜಾಗೊಳಿಸಿದೆ. ಇದರಿಂದಾಗಿ ಯಡಿಯೂರಪ್ಪ ಮತ್ತು ಪುತ್ರ ರಾಘವೇಂದ್ರ ಹಾಗೂ ಇತರ ಕುಟುಂಬ ಸದಸ್ಯರು ಆರೋಪಗಳಿಂದ ಮುಕ್ತರಾಗಿ ರಿಲೀಫ್ ಸಿಕ್ಕಂತಾಗಿದೆ.
Source ee sanje
No comments