Breaking News

ಎಐಸಿಸಿ ಯಿಂದ ಜನಾರ್ಧನ ಪೂಜಾರಿಗೆ ನೋಟೀಸ್


ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸದಾ ಕೆಂಡ ಕಾರುತಿದ್ದ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಅವರಿಗೆ ಎಐಸಿಸಿ ಯಿಂದ  ನೋಟೀಸ್ ಜಾರಿಯಾಗಿದೆ .
ಸಿದ್ದರಾಮಯ್ಯನವರು ಸಿಎಂ ಆಗಿ ಮುಂದು ವರಿದರಿದರೆ ಪಕ್ಷಕ್ಕೆ ಉಳಿಗಾಲವಿಲ್ಲ ಅವರಿಂದ ಕರ್ನಾಟಕ ಕಾಂಗ್ರೆಸ್ ನ ವರ್ಚಸ್ಸಿಗೆ ಧಕ್ಕೆಯಾಗಿದೆ . ಕರ್ನಾಟಕ ಸಿಎಂ ಮತ್ತು ರಾಜ್ಯ ಸಚಿವರುಗಳ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಜನಾರ್ಧನ ಪೂಜಾರಿ ಅವರ ಬಗ್ಗೆ ಇತ್ತೀಚಿಗೆ ಕಾಂಗ್ರೆಸ್ ನ ಕೆಲ ಮುಖಂಡರು ಎಐಸಿಸಿಗೆ ದೂರು ನೀಡಿದ್ದರು ಈ ಹಿನ್ನಲೆಯಲ್ಲಿ ಎಐಸಿಸಿ ಯಿಂದ ಜನಾರ್ಧನ ಪೂಜಾರಿಗೆ ನೋಟೀಸ್ ಜಾರಿಗೊಳಿಸಿದೆ ಎಂದು ತಿಳಿದು ಬಂದಿದೆ 

No comments