Breaking News

ಲಂಕೇಶ್ ವಾರ ಪತ್ರಿಕೆ ವಿರುದ್ಧ ಮಾನನಷ್ಟ ಮೊಕ್ಕದ್ದಮ್ಮೆ ಪರಿಹಾರ ನೀಡಲು ಕೋರ್ಟ್ ಆದೇಶ


ಶಿರಸಿ : ರಾಜ್ಯದ ಸಹಕಾರಿ ಸಂಸ್ಥೆ ಟಿಎಸ್ಎಸ್ ವಿರುದ್ಧ ದಿನಾಂಕ ಆಗಸ್ಟ್ 17 2012 ರಂದು ವರದಿ ಪ್ರಕಟಿಸಿದ್ದಕ್ಕಾಗಿ ಲಂಕೇಶ್ ವಾರ ಪತ್ರಿಕೆ ಮಾಲೀಕರು ಮತ್ತು ಸಂಪಾದಕರು ಆದ ಗೌರಿ ಲಂಕೇಶ್ ಅವರ ಸಂಸ್ಥೆಗೆ 2 .5  ಲಕ್ಷ ಪರಿಹಾರ ನೀಡಬೇಕೆಂದು ಇಲ್ಲಿನ ಸಿವಿಲ್ ಕೋರ್ಟ್ ಆದೇಶ ನೀಡಿದೆ .
ಗೌರಿ ಲಂಕೇಶ್ ಅವರು  ಟಿಎಸ್ಎಸ್ ನಲ್ಲಿ 101 ಕೋಟಿ ಅಪಾರ -ತಪರಾ ಆಗಿದೆ ಎಂಬ ಸತ್ಯಕ್ಕೆ ದೂರವಾದ ವರದಿ ಪ್ರಕಟಿಸಿದ್ದಾರೆಂದು ಆಕ್ಷೇಪಿಸಿದ್ದ ಸಂಸ್ಥೆಯು  ಗೌರಿ ಲಂಕೇಶ್ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸಿತ್ತು .ಸಂಸ್ಥೆಯ ವಿರುದ್ಧ ಸುಳ್ಳು ಆರೋಪ ಮತ್ತು ಸಂಸ್ಥೆಯ ಅಧ್ಯಕ್ಷರು ,ವ್ಯವಸ್ಥಾಪಕರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಲೇಖನ ಪ್ರಕಟಿಸಿದ್ದರಿಂದ ಸಂಸ್ಥೆಯ ಘನತೆಗೆ ದಕ್ಕೆ ತಂದಿದೆ ಎಂದು ಧಾವೆಯಲ್ಲಿ ದೂರಲಾಗಿತ್ತು .ಈ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ನ್ಯಾಯಾಲಯ  ಟಿಎಸ್ಎಸ್ ಸಂಸ್ಥೆಯ ವಿರುದ್ಧ ಪ್ರಕಟಿಸಿದ ವರದಿ ಸುಳ್ಳು ಮತ್ತು ಮಾನಹಾನಿಕರ ಎಂದು ತೀರ್ಪು ನೀಡಿದೆ 
source -vk

No comments