Breaking News

ಎಐಎಡಿಎಂಕೆ ಸಾರಥ್ಯ ಶಶಿಕಲಾಗೆ ?


ಚೆನ್ನೈ: ಜಯಲಲಿತಾ ನಿಧನದಿಂದ ತೆರವಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಯಾರು ಅರ್ಹರು ಎಂಬ ವಿಚಾರ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಕಾಡುತ್ತಿದೆ.ಜಯಲಲಿತಾ ಅವರಿಗೆ 3 ದಶಕದಿಂದ ಅಪ್ತರೆನಿಸಿಕೊಂಡ  ಶಶಿಕಲಾ ನಟರಾಜನ್ ಅವರೇ ಯೋಗ್ಯ ಎಂಬ ಮಾತುಗಳು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ .ಜಯಲಲಿತಾ ಅವರ ರಾಜಕೀಯ ಕಾರ್ಯವೈಖರಿ ಮತ್ತು ಚುನಾವಣೆ ಸಂದರ್ಭದಲ್ಲಿ  ಅಭ್ಯರ್ಥಿಗಳ ಆಯ್ಕೆಯಲ್ಲಿ ಶಶಿಕಲಾ ಅವರೇ ಪ್ರಮುಖ ಪಾತ್ರ ವಹಿಸುತ್ತಿದ್ದರು .ಪಕ್ಷದ ಕಾರ್ಯಕರ್ತರು ಶಶಿಕಲಾ ಅವರನ್ನು ಚಿಕ್ಕ ಅಮ್ಮಾ ಎಂದು ಕರೆಯುತ್ತಾರೆ.ಜಯಾ ಅವರ ಆಪ್ತ ಪನ್ನೀರ್‌ಸೆಲ್ವಂ ಮುಖ್ಯಮಂತ್ರಿ ಆಗಿರುವುದರಿಂದ ಸಹಜವಾಗಿ ಶಶಿಕಲಾ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಬೇಕು ಎಂಬುದು ಬೆಂಬಲಿಗರ ವಾದವಾಗಿದೆ. 

No comments