Breaking News

ನೂರು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕಾಡಾನೆ ಸಿದ್ಧ ಇನ್ನಿಲ್ಲ


ರಾಮನಗರ : ಅರಣ್ಯ ಇಲಾಖೆಯ ನಿರ್ಲಕ್ಷ  ಮತ್ತು  ಅಲಸ್ಯತನದಿಂದ ಸುಮಾರು ನೂರು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕಾಡಾನೆ ಸಿದ್ದ ರಾತ್ರಿ 2.30ರ ಸುಮಾರಿಗೆ ಇಲ್ಲಿನ ಮಂಚೇನಬೆಲೆಯ ಅವ್ವೇರಹಳ್ಳಿಯಲ್ಲಿ ಕೊನೆಯುಸಿರೆಳೆದಿದೆ ಎಂದು ತಿಳಿದು ಬಂದಿದೆ 
ಆಗಸ್ಟ್ 30ರಂದು ಕಗ್ಗಲೀಪುರ ಅರಣ್ಯ ವಲಯದಲ್ಲಿ ರೈತರ ಬೆಳೆಗಳನ್ನು ತಿನ್ನುತ್ತಿದ್ದನೆಂದು ಈ ಸಿದ್ಧನಿಗೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರು ಕಾಡಿಗೆ ಅಟ್ಟುವಾಗ ತಾವರೆಕೆರೆ ಹೋಬಳಿಯ ಗೋಪಾಲಪುರ ಬಳಿ ಹಳ್ಳಕ್ಕೆ ಬಿದ್ದು ಬಲಗಾಲಿನ ಮೂಳೆಗೆ ಪೆಟ್ಟು ಬಿದ್ದಿತ್ತು. ನಂತರ ಹಳ್ಳದಿಂದ ಮೇಲೆದ್ದ ಸಿದ್ದನಿಗೆ ಪಟಾಕಿ ಹೊಡೆದು ಬೆದರಿಸಲಾಗಿತ್ತು. ನಂತರ ಈ ಆನೆಯ ದೇಹದಲ್ಲಿ ಗುಂಡುಗಳೂ ಪತ್ತೆಯಾಗಿದ್ದವು.
ಬರಬರುತ್ತಾ ನಿತ್ರಾಣವಾಗಿದ್ದ ಸಿದ್ಧನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ಸಾಮಾಜಿಕ ಜಾಲಾತಾಣ ಹಾಗೂ ಮಾಧ್ಯಮಗಳಲ್ಲಿ ಸಿದ್ಧನಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂಬ ಒತ್ತಾಯ ವ್ಯಕ್ತವಾದಾಗ ಆತನ ಚಿಕಿತ್ಸೆಗೆ ಸರಕಾರ ಸಕಲ ವ್ಯವಸ್ಥೆ ಮಾಡಿತ್ತು. ಮಲಗಿದಲ್ಲಿಯೇ ಇದ್ದ ಸಿದ್ಧನನ್ನು ಮೇಲೆತ್ತಲು ಸೈನ್ಯದ ಸಹಾಯವನ್ನೂ ಪಡೆಯಲಾಗಿತ್ತು.ಕಾಲು ಮುರಿದುಕೊಂಡಿದ್ದ ಕಾಡಾನೆ ಸಿದ್ದನ ಕಾಲಲ್ಲಿ ಕೀವು ತುಂಬಿಕೊಂಡು ಊದಿಕೊಂಡಿತ್ತು. ಕಾಲಿನ ಕೀವು ದೇಹಕ್ಕೆ ಹರಡಿ ಕಳೆದ ರಾತ್ರಿ ಸಿದ್ದ ಮೃತಪಟ್ಟಿದ್ದಾನೆ .
source- vijayakarnataka

No comments