ಕಟೀಲು ದೇವರ ಅವಹೇಳನ ಫೇಸ್ ಬುಕ್ ಕಚೇರಿ ಮೇಲೆ ದಾಳಿ ನಡೆಸಿದ ಮಂಗಳೂರು ಪೊಲೀಸ್
ಮಂಗಳೂರು : ಸಾಮಾಜಿಕ ತಾಣದಲ್ಲಿ ಜಬ್ಬಾರ್ ಬಿಸಿ ರೋಡ್ ಎಂಬ ಖಾತೆಯನ್ನು ತೆರೆದು ಕಟೀಲು ದುರ್ಗಾ ಪರಮೇಶ್ವರಿ ದೇವರ ಬಗ್ಗೆ ಅವಹೇಳನಕಾರಿ ನಿಂದಿಸಿದ ಪ್ರಕರಣದ ಕುರಿತು ಆರೋಪಿಗಳ ಬಗ್ಗೆ ಮಾಹಿತಿ ನೀಡದ ಮತ್ತು ತನಿಖೆಗೆ ಸಹಕರಿಸದ ಮುಂಬಯಿ ಫೇಸ್ ಬುಕ್ ಕಚೇರಿಗೆ ಮಂಗಳೂರು ಪೊಲೀಸರು ನ್ಯಾಯಾಲಯದ ಸರ್ಚ್ ವಾರಂಟ್ ಜೊತೆ ತೆರಳಿ ದುಬೈನಲ್ಲಿರುವ ಪ್ರಮುಖ ಆರೋಪಿ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸ್ ತಂಡ ಕೋರಿದ್ದಾರೆ ಎಂದು ತಿಳಿದು ಬಂದಿದೆ .ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟೆಂಬರ್ 9 ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಾಫಿ ಬೆಳ್ಳಾರೆ ಎಂಬಾತನನ್ನು ಬಂಧಿಸಲಾಗಿತ್ತು ಇದೇ ಪ್ರಕರಣಕ್ಕೆ ಸಂಬಂಧಿಸಿ ಮೂಡಬಿದ್ರೆಯ ವಕೀಲ ಹನೀಫ್ ಸಹಿತ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗಿತ್ತು ,ಪ್ರಕರಣ ಸಂಬಂಧ ಮೂರೂ ತನಿಖಾ ತಂಡ ರಚಿಸಲಾಗಿತ್ತು ಆದರೂ ಪ್ರಮುಖ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ , ಇದೀಗ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಫೇಸ್ಬುಕ್ ಸಂಸ್ಥೆ ಸಹಕರಿಸಲಿಲ್ಲವೆಂಬ ಕಾರಣಕ್ಕೆ ಮಂಗಳೂರು ಪೊಲೀಸರು ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿ ಸರ್ಚ್ ವಾರಂಟ್ ಪಡೆದು ಮುಂಬಯಿ ಫೇಸ್ ಬುಕ್ ಕಚೇರಿ ಮೇಲೆ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ
No comments