ಚಂಡೀಗಢ ಪಾಲಿಕೆ ಚುಣಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಜಯ.
ಚಂಡಿಗಢ : ಚಂಡೀಗಢ ಪಾಲಿಕೆಗೆ ನಡೆದ ಚುಣಾವಣೆಯಲ್ಲಿ ಬಿಜೆಪಿ-ಶಿರೋಮಣಿ ಅಕಾಲಿದಳ ಮೈತ್ರಿಕೂಟ ಭರ್ಜರಿ ಜಯಗಳಿಸಿದೆ. ಕಳೆದ 14 ವರ್ಷಗಳಿಂದ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಪಾಲಿಕೆ ಈಗ ಬಿಜೆಪಿ ಪಾಲಾಗಿದೆ.
26 ಸ್ಥಾನಗಳಿಗೆ ನಡೆದ ಪಾಲಿಕೆ ಚುಣಾವಣೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಜಯಗಳಿಸಿದರೆ ಕಾಂಗ್ರೆಸ್ 4ಸ್ಥಾನಗಳಲ್ಲಿ ಜಯಗಳಿಸಿದೆ ಉಳಿದ ಎರಡು ಸ್ಥಾನಗಳಲ್ಲಿ ಶಿರೋಮಣಿ ಅಕಾಲಿದಳ ಒಂದು ಮತ್ತು ಪಕ್ಷೇತರ ಸದಸ್ಯ ಒಂದು ಸ್ಥಾನಗಳಲ್ಲಿ ಜಯಗಳಿಸಿದೆ.
ನೋಟ್ ನಿಶೇಧ ನಿರ್ಧಾರದ ಬಳಿಕ ಈ ಚುಣಾವಣೆಯಲ್ಲಿ ಜಯಗಳಿಸುವುದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಗೆಲುವಿನ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ "ನೋಟ್ ನಿಷೇಧದ ನಿರ್ಧಾರವನ್ನು ಜನ ಬೆಂಬಲಿಸಿದ್ದು, ನವೆಂಬರ್ 8ರ ನಂತರ ನಡೆದ ಎಲ್ಲಾ ಚುಣಾವಣೆಯಲ್ಲಿ ಬಿಜೆಪಿ ಜಯಗಳಿಸುತ್ತದೆ" ಎಂದಿದ್ದಾರೆ.
26ಸ್ಥಾನಗಳಲ್ಲಿ ಮೈತ್ರಿಕೂಟ ಬಿಜೆಪಿ 22 ಹಾಗೂ ಶಿರೋಮಣಿ ಅಕಾಲಿದಳ 4 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಬಹುಮತ ಸಾಬೀತುಪಡಿಸಲು 19ಮತಗಳ ಅಗತ್ಯವಿರುವುದರಿಂದ ಬಿಜೆಪಿ ಅಭ್ಯರ್ಥಿ ಮೇಯರ್ ಗದ್ದುಗೆಗೆ ಸುಲಭವಾಗಿ ಏರಲಿದ್ದಾರೆ.
No comments