Breaking News

ಆಗಾಗ ನಿಯಮಗಳನ್ನು ಬದಲಾಯಿಸುತ್ತಿರುವ ಆರ್‍ಬಿಐ ವಿರುದ್ಧ ವ್ಯಂಗ್ಯವಾಡಿದ ರಾಹುಲ್ ಗಾಂಧಿ.

ನವದೆಹಲಿ : ಕೇಂದ್ರಸರ್ಕಾರ ಹಳೆಯ 500 ಹಾಗೂ 1000 ಮುಖಬೆಲೆಯ ನೋಟುಗಳ ನಿಶೇಧದ ನಿರ್ಧಾರ ಕೈಗೊಂಡ ನಂತರ ಆರ್‍ಬಿಐ ಆಗಾಗ ತನ್ನ ನೀತಿನಿಯಮಗಳನ್ನು ಬದಲಾಯಿಸುತ್ತಿದೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ "ಮೋದಿ ಬಟ್ಟೆ ಬದಲಾಯಿಸಿದಂತೆ ಆರ್‍ಬಿಐ ನೀತಿನಿಯಮಗಳನ್ನು ಬದಲಾಯಿಸುತ್ತೆ" ಎಂದಿದ್ದಾರೆ.
ಆರ್‍ಬಿಐ ಹೊರ ತಂದಿರುವ ಹೊಸ ನಿಯಮದ ಪ್ರಕಾರ ಡಿಸೆಂಬರ್ 30ರವರೆಗೆ ಒಮ್ಮೆ ಮಾತ್ರ ಐದು ಸಾವಿರಕ್ಕಿಂತ ಹೆಚ್ಚು ಹಣ ಜಮಾವಣೆ ಮಾಡಲು ಸಾಧ್ಯ.ಈ ನಿಯಮ ಜನರನ್ನು ಗೊಂದಲಕ್ಕೀಡು ಮಾಡಿದ್ದು ಈ ಕಾರಣಕ್ಕೆ ರಾಹುಲ್ ಆರ್‍ಬಿಐ ನಿಯಮಗಳ ವಿರುದ್ದ ವ್ಯಂಗ್ಯವಾಡಿದ್ದಾರೆ.

No comments