Breaking News

ಮೋದಿ ಸರ್ಕಾರದ ನೋಟ್ ಬ್ಯಾನ್ ಎಫೆಕ್ಟ್ - ಗರಿಷ್ಟ ಬೆಲೆಯ ನೋಟು ರದ್ದು ಮಾಡಲಿರುವ ಪಾಕಿಸ್ತಾನ.

ಪಾಕಿಸ್ತಾನ : ಕಪ್ಪು ಹಣದ ವಿರುದ್ದ ಹೋರಾಡಲು ಭಾರತದಲ್ಲಿ ಗರಿಷ್ಟ ಮೊತ್ತದ ನೋಟುಗಳ ನಿಶೇಧವಾದ ನಂತರ ಅನೇಕ ದೇಶಗಳು ಭಾರತವನ್ನು ಅನುಸರಿಸುತ್ತಿವೆ. ಈಗ ಆ ಸಾಲಿನಲ್ಲಿ ನಿಂತಿರುವ ದೇಶ ನೆರೆಯ ಪಾಕಿಸ್ತಾನ. 
ಕಪ್ಪು ಹಣ ನಿಯಂತ್ರಣ ಮಾಡಲು ಪಾಕಿಸ್ತಾನ ಸರ್ಕಾರ 5000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಶೇಧ ಮಾಡಲು ತೀರ್ಮಾನಿಸಿದೆ.ಈ ಬಗ್ಗೆ ಸೋಮವಾರ ಪಾಕಿಸ್ತಾನದ ಮುಸ್ಲಿಂ ಲೀಗ್ ನೇತಾರ ಉಸ್ಮಾನ್ ಸೈಫ್ ಇಲ್ಲಾ ಅವರು ಪಾಕಿಸ್ತಾನ ಸಂಸತ್ತಿನಲ್ಲಿ ಮಂಡಿಸಿದ ಗೊತ್ತುವಳಿಯನ್ನು ಮೇಲ್ಮನೆಯಲ್ಲಿದ್ದ ಹೆಚ್ಚಿನ ಸದಸ್ಯರು ಅನುಮೋದಿಸಿದ್ದಾರೆ.

ಬ್ಯಾಂಕ್ ಖಾತೆಗಳ ಬಳಕೆಯನ್ನು ಉತ್ತೇಜಿಸಲು ಮತ್ತು ಠೇವಣಿಯಾಗದ ದಾಖಲೆ ರಹಿತ ಆರ್ಥಿಕತೆಯ ಗಾತ್ರ ಕುಗ್ಗಿಸಲು 5000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಮೂರರಿಂದ ಐದು ವರ್ಷ ಬೇಕಾಗಬಹುದು ಎಂದು ಹೇಳಲಾಗುತ್ತಿದೆ

No comments