Breaking News

ಕಳಪೆ ಕಾಮಗಾರಿ 47 ಲಕ್ಷದ ಅಣೆಕಟ್ಟು ನೀರುಪಾಲು. ಪೃಕೃತಿ ವಿಕೋಪಕ್ಕೆ ಅಣೆಕಟ್ಟು ನೀರುಪಾಲಗಿದೆ ಎಂದ ಅಧಿಕಾರಿ

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಉಬರಡ್ಕದಲ್ಲಿ 47ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಅಣೆಕಟ್ಟು ಒಡೆದು ನೀರುಪಾಲಾಗಿದೆ. ಮೇಲ್ನೋಟಕ್ಕೆ ಇದೊಂದು ಕಳಪೆ ಕಾಮಗಾರಿಯಂತೆ ಕಂಡುಬರುತ್ತಿದ್ದು, ಅಣೆಕಟ್ಟು ಕಾಮಗಾರಿ ನಡೆಯುವ ಸಮಯದಲ್ಲೇ ಸ್ಥಳೀಯರು ಅಣೆಕಟ್ಟು ನಿರ್ಮಾಣ ಕಳಪೆಯಾಗಿದೆ ಎಂದಿದ್ದರು.

ಇಂಜಿನಿಯರ್ ಒರ್ವರು ಇದರ ಬಗ್ಗೆ ಸರಿಯಾದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಹುಸಿ ಭರವಸೆ ನೀಡಿದ್ದು ಬಿಟ್ಟರೆ ಬೇರೆ ಯಾವುದೇ ಅಧಿಕಾರಿಗಳು ಸ್ಥಳೀಯರ ಮಾತನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ನೀರಾವರಿ ಉಪಯೋಗಕ್ಕೆ ಸಹಾಯಕವಾಗಲೆಂದು ಶಾಸಕರ ಶಿಫಾಸಿನ ಮೇರೆಗೆ 2013-14 ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಯವರು 42 ಲಕ್ಷ ವೆಚ್ಚದಲ್ಲಿ ಈ ಕಿಂಡಿ ಅಣೆಕಟ್ಟನ್ನು ನಿರ್ಮಾಣ ಮಾಡಿದ್ದರು.  ಆದರೆ ಕಾಮಗಾರಿಯಾಗಿ ಎರಡು ವರ್ಷದಲ್ಲೇ ಅಣೆಕಟ್ಟು ಕೊಚ್ಚಿಹೋಗಿದೆ.

ಕಾಮಗಾರಿ ನಡೆಸಿದ ಇಂಜಿನಿಯರ್ ಅಣೆಕಟ್ಟು ಪ್ರಕೃತಿ ವಿಕೋಪದಿಂದಾಗಿ ಕೊಚ್ಚಿಹೋಗಿದೆ ಎಂದು ಹೇಳಿದ್ದು ಸ್ಥಳೀಯ ಜನತೆಯ ಕೋಪಕ್ಕೆ ಕಾರಣವಾಗಿದೆ. ಅಣೆಕಟ್ಟು ನೀರಿನಲ್ಲಿ ಕೊಚ್ಚಿ ಹೋಗುವಂತಹ ಯಾವುದೇ ಪ್ರಕೃತಿ ವಿಕೋಪ ಸುಳ್ಯದಲ್ಲಿ ವರದಿಯಾಗಿಲ್ಲ ಎಂದಿದ್ದಾರೆ.

No comments