ದೇವಾಲಯದ ಅಶ್ವತ್ಥ ಕಟ್ಟೆಗೆ ದನದ ರುಂಡ ಎಸೆದು ಹೋಗಿರುವ ದುಷ್ಕರ್ಮಿಗಳು.
ಮಂಗಳೂರು : ಮಂಗಳೂರಿನಲ್ಲಿ ದುಷ್ಕರ್ಮಿಗಳು ಮತ್ತೆ ಕೋಮುಗಲಭೆ ನಡೆಸಲು ಸಂಚುರೂಪಿಸಿದ್ದಾರೆ. ದುಷ್ಕರ್ಮಿಗಳು ದನದ ರುಂಡವನ್ನು ಕಡಿದು ದೇವಸ್ಥಾನದ ಅಶ್ವತ್ಥ ಕಟ್ಟೆಯಲ್ಲಿ ತಂದು ಹಾಕಿದ್ದಾರೆ. ಗುರುಪುರ ಕೈಕಂಬ ಸಮೀಪದ ಕಂದಾವರದ ಮೂಡುಕರೆ ಬೈಲುಮಾಗಣೆ ಎಂಬಲ್ಲಿ ಘಟನೆ ನಡೆದಿದೆ.
ಸ್ಥಳೀಯರ ಪ್ರಕಾರ ರುಂಡವನ್ನು ಕೆಲವೇ ಗಂಟೆಗಳ ಹಿಂದೆ ಕತ್ತರಿಸಿದಂತಿದ್ದು ರುಂಡ ಎಲ್ಲಿಂದ ಬಂದಿದೆ, ಯಾರ ಕೃತ್ಯ ಎಂಬುದು ಗೊತ್ತಾಗಿಲ್ಲ. ಸ್ಥಳಕ್ಕೆ ಭಜರಂಗದಳದ ಮುಖಂಡ ಭುಜಂಗ ಕುಲಾಲ್ ಸಮೇತ ಹಲವಾರು ಮಂದಿ ಧಾವಿಸಿ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದರು. ಕರಾವಳಿ ಹಿಂದೂಗಳು ತುಂಬಾ ನಂಬಿಕೆಯಿಂದ ಪೂಜಿಸುವ ಧೂಮಾವತಿ ಪುಣ್ಯಕ್ಷೇತ್ರದ ಸಮೀಪದಲ್ಲಿಯೇ ಘಟನೆ ನಡೆದಿದ್ದು ಹಿಂದೂಗಳನ್ನು ಕೆರಳಿಸಿದೆ.
ಬಜ್ಪೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

No comments