ಯಾರು ಎಷ್ಟೇ ವಿರೋಧ ಮಾಡಿದರು ನಾನು ಬ್ರಿಗೇಡ್ ಸಮಾವೇಶ ಮಾಡುತ್ತೇನೆ : ಈಶ್ವರಪ್ಪ
ನಂದಗಡದಲ್ಲಿ ನಡೆಯಲಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶದ ಸಿದ್ದತೆಯನ್ನು ಪರಿಶೀಲಿಸಲು ಖಾನಾಪೂರ ತಾಲೂಕಿನ ನಂದಗಡಕ್ಕೆ ಭೇಟಿ ನೀಡಿದ ಈಶ್ವರಪ್ಪನವರು ಬ್ರಿಗೇಡ್ ನ ಪದಾಧಿಕಾರಿಗಳ ಪ್ರಮಾಣ ವಚನ ಸಮಾರಂಭದ ಸಿದ್ದತೆಯನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪನವರು ಹಿಂದುಳಿದ ವರ್ಗದ ಕಲ್ಯಾಣಕ್ಕೆ ಬ್ರಿಗೇಡ್ ಜನ್ಮ ತಾಳಿದೆ ,ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಹೀಗಾಗಿ ಸಮಾವೇಶದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಖಾರವಾಗಿ ಹೇಳಿದರು .
ನಂದಗಡದಲ್ಲಿ ನಡೆಯಲಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶಕ್ಕೆ ಬಿಜೆಪಿ ನಾಯಕರನ್ನು ಆಹ್ವಾನ ನೀಡುವುದಿಲ್ಲ ,ಪಕ್ಷ ಭೇದ ಮರೆತು ಯಾರು ಕೂಡ ಈ ಸಮಾವೇಶದಲ್ಲಿ ಭಾಗವಹಿಸಬಹುದು ಯಾರು ಎಷ್ಟೇ ವಿರೋಧ ಮಾಡಿದರು ನಾನು ಬ್ರಿಗೇಡ್ ಸಮಾವೇಶ ಮಾಡುತ್ತೇನೆ ಎಂದರು .
ನಾನು ನಮ್ಮ ಪಕ್ಷದ ನಾಯಕರಿಗೆ ರಾಯಣ್ಣ ಬ್ರಿಗೇಡ್ ಬಗ್ಗೆ ಮನವರಿಕೆ ಮಾಡಿಕೊಟ್ಟಿದೇನೆ. ಆದರೂ ಯಡ್ಡಿರೋಪ್ಪನವರು ಯಾಕೆ ಬ್ರಿಗೇಡ್ ಅನ್ನು ವಿರೋಧಿಸುತ್ತಾರೆ ಎಂದು ನನಗೆ ತಿಳಿಯದಾಗಿದೆ ,ರಾಯಣ್ಣ ಬ್ರಿಗೇಡ್ ಬಗ್ಗೆ ಕೇಂದ್ರ ನಾಯಕರಿಗೆ ಸ್ಪಷ್ಟನೆ ನೀಡಲು ನಾನು ತಯಾರಿದ್ದೇನೆ ಎಂದು ಹೇಳಿದರು
source-vijaya karanataka
No comments