Breaking News

ಹಿಂದುತ್ವದ ಹೆಸರಿನಲ್ಲಿ ಹಿಂದುಳಿದ ವರ್ಗದವರ ದುರ್ಬಳಕೆ : ದಿನೇಶ್ ಅಮೀನ್ ಮಟ್ಟು


ಪುತ್ತೂರಿನಲ್ಲಿ ನಡೆ ಕಾಂಗ್ರೆಸ್ ನಡಿಗೆ ಸುರಾಜ್ಯದ ಕಡೆಗೆ ಕಾರ್ಯಾಗಾರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು
 “ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ಸಮಾಜದ ಹಿಂದುಳಿದ ವರ್ಗಗಳನ್ನು ದುರ್ಬಳಕೆ ಮಾಡುತ್ತಿದ್ದು ತಮಗೆ ಗೊತ್ತಿಲ್ಲದಂತೆ ಅವರು ಅದರೊಳಗೆ ಸೇರಿಕೊಂಡು ತಮ್ಮ ಬದುಕನ್ನು ನಾಶ ಮಾಡುತ್ತಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವದ ಹೆಸರಿನಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ನಾರಾಯಣ ಗುರುಗಳ ಸಮುದಾಯ ಇಂದು ಹೆಚ್ಚಾಗಿ ಕೇಸರಿಪಡೆಯಲ್ಲಿ ಗುರುತಿಸಿಕೊಂಡು ತಮ್ಮನ್ನು ತಾವೇ ನಾಶ ಮಾಡಿಸಿಕೊಳ್ಳುತ್ತಿದ್ದಾರೆ, ಈ ಕಾರಣಕ್ಕೆ ಜಿಲ್ಲೆಯಲ್ಲಿ ಬಿಲ್ಲವ ಸಮುದಾಯ ಅತ್ಯಂತ ಹಿಂದುಳಿದಿದೆ. ನಾರಾಯಣ ಗುರುಗಳು ಯಾವ ತತ್ವ ಸಿದ್ದಾಂತದಲ್ಲಿ ಈ ದೇಶವನ್ನು ಕಟ್ಟಬೇಕು ಎಂದು ಹೇಳಿದ್ದಾರೋ ಅವರ ಮಾತನ್ನು ಅವರ ಸಮುದಾಯದ ಮಂದಿಯೇ ಪಾಲಿಸದ ಸ್ಥಿತಿ ನಿರ್ಮಾಣವಾಗಿದೆ, ಕೇರಳದ ಜನರು ನಾರಾಯಣ ಗುರುಗಳ ತತ್ವವನ್ನು ಅಳವಡಿಸಿಕೊಂಡ ಕಾರಣ ಅಲ್ಲಿ ಶೇ 100 ಸಾಕ್ಷರತೆಯನ್ನು ಕಾಣುವಂತಾಯಿತು, ಅಲ್ಲಿ ಇಂದಿಗೂ ಕೋಮುವಾದಿಗಳನ್ನು ನೆಲೆಯೂರಲು ನಾರಾಯಣ ಗುರು ಅನುಯಾಯಿಗಳು ಬಿಡಲಿಲ್ಲ” ಎಂದರು.
ಹಿಂದುತ್ವ ಎಂದರೆ ಅದು ಬಿಜೆಪಿಯವರ ಹಿಂದುತ್ವ ಎಂಬಂತೆ ಬಿಂಬಿಸಿ ಬಡ ದುರ್ಬಲ ವರ್ಗದವನ್ನು ದಾರಿತಪ್ಪಿಸುವ ಮೂಲಕ ಅವರನ್ನು ಕೋಮುವಾದಿಗಳನ್ನಾಗಿ ಮಾಡುವಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಯಶಸ್ವಿಯಗುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ” ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದರು.

Source karavali-ale 

No comments