ದಾರಿ ತಪ್ಪಿದ ಉಳ್ಳಾಲ ನಗರಸಭೆ ಪೌರಾಯುಕ್ತೆ ಪುತ್ರ ವಿಮರ್ಶ್ ಆಳ್ವಾ
ಮಂಗಳೂರು : ಉಳ್ಳಾಲ ಬಂದರು ಪೊಲೀಸರು ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೌರಾಯುಕ್ತೆ ವಾಣಿ ಆಳ್ವಾ ಪುತ್ರ 21 ವರ್ಷದ ವಿಮರ್ಶ್ ಆಳ್ವಾ ಮತ್ತವನ ಗೆಳೆಯ ಶಾಹಿಲ್‍ನನ್ನು ಬಂಧಿಸಿದ್ದಾರೆ.
ಡಿಸೆಂಬರ್ 13 ರಂದು ಉಳ್ಳಾಲದ ಮಡ್ಯಾರುವಿನಲ್ಲಿ ಮಹಿಳೆಯ ಸರವನ್ನು ಕಸಿದು ಪರಾರಿ ಆಗಿದ್ದರು . ಮತ್ತೆ ಸರಗಳ್ಳತನಕ್ಕೆ ಯತ್ನಿಸಿದ್ದಾಗ ಬಂದರು ಠಾಣಾ ಇನ್ಸ್ ಪೆಕ್ಟರ್ ಶಾಂತರಾಮ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದಾರೆ. ಬಂಧಿತರಿಂದ ಎರಡು ಲಕ್ಷ ರೂ. ಮೌಲ್ಯದ 3 ಚಿನ್ನದ ಸರ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಿಂದೆಯೂ ಈ ಇಬ್ಬರು ಸಾಕಷ್ಟು ಸರಗಳ್ಳತನ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
source : public tv
No comments