Breaking News

ನೋಟ್‌ ಬ್ಯಾನ್‌ ನೆಪ ಹೇಳಿ ತೆರಿಗೆ ಕಟ್ಟುವುದರಿಂದ ನುಣುಚಿಕೊಳ್ಳಲು ಅವಕಾಶ ನೀಡಬೇಡಿ ಸಿಎಂ


ಬೆಂಗಳೂರು : ಐನೂರು ಮತ್ತು ಸಾವಿರ ನೋಟ್‌ ಬ್ಯಾನ್‌ ಆದ ನಂತರ ವಾಣಿಜ್ಯ ವಹಿವಾಟು ತಗ್ಗಿದ ಹಿನ್ನಲೆಯಲ್ಲಿ ಈ ಬಾರಿ ರಾಜ್ಯ ತೆರಿಗೆ ಸಂಗ್ರಹದಲ್ಲಿ 3 ಸಾವಿರ ಕೋಟಿ ಕಡಿಮೆ ಆಗುವ ಅಂತಂಕ ಮೂಡಿದೆ .ವಾರ್ಷಿಕ  ಆದಾಯ ಖೋತಾದಿಂದ ರಾಜ್ಯ ಸರಕಾರದ ವಿವಿಧ ಯೋಜನೆಗಳ ಜಾರಿಗೆ ತೊಡಕು ಆಗುವುದರಿಂದ  ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಕಟ್ಟು ನಿಟ್ಟಿನ ಆದೇಶ ಮಾಡಿದ್ದಾರೆ.

ಕಳೆದ ಎರಡು ತಿಂಗಳಿನಿಂದ ತೆರಿಗೆ ಸಂಗ್ರಹ ಗಣನೀಯವಾಗಿ ಕುಸಿತ ಕಂಡಿದ್ದು 2016-17ನೇ ಸಾಲಿನಲ್ಲಿ 83 ಸಾವಿರ ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದು, ತೆರಿಗೆಯ ಎಲ್ಲಾ ಮೂಲಗಳಿಂದ ಪ್ರತಿ ತಿಂಗಳಿಗೆ ಸರಾಸರಿ 6500 ಕೋಟಿ ರೂ. ತೆರಿಗೆ ಸಂಗ್ರಹ ಆಗಬೇಕಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಅಂಕಿ ಅಂಶಗಳನ್ನು  ನೀಡಿದರು ಎಂದು ಮೂಲಗಳು ಹೇಳಿವೆ 



No comments