ಕಟ್ಟಡ ಕಾಮಗಾರಿ ವೇಳೆ ಅಗ್ನಿ ಅವಘಡ, ಸುಟ್ಟು ಕರಕಲಾದ ಯುವಕ.
ಶ್ರೀಲಂಕ : ಶ್ರೀಲಂಕಾದ ನೂವರ-ಎಲಿಯಾ ಎಂಬಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತಕ್ಕೆ ಯುವಕನೋರ್ವ ಸುಟ್ಟುಕರಕಲಾದ ಘಟನೆ ನಡೆದಿದೆ. ಮೊತ್ತೋರ್ವ ಗಂಭೀರ ಗಾಯಗಳೊಂದಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾನೆ.
ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ 22ವರ್ಷದ ಯುವಕ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಗಡಕ್ಕೆ ಸಿಲುಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಯುವಕನ ದೇಹ ಸಂಪೂರ್ಣ ಸುಟ್ಟುಹೋಗಿದ್ದು ಗುರುತು ಪತ್ತೆಹಚ್ಚಲಾಗದಷ್ಟು ಕೇಳಲಾಗಿದೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕದಳ ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವ ಮೂಲಕ ಹೆಚ್ಚು ಅನಾಹುತವಾಗುವುದನ್ನು ತಡೆದರು.
No comments