Breaking News

ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ದಿನಗೂಲಿ ನೌಕರ.

ಆಂದ್ರಪ್ರದೇಶ : ಆಂದ್ರಪ್ರದೇಶದ ವಿಜಯವಾಡದಲ್ಲಿ ದಿನಗೂಲಿ ನೌಕರನೊಬ್ಬ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.
ಚಿತ್ತೂರು ಜಿಲ್ಲೆಯ ಆಂಧ್ರ ಬ್ಯಾಂಕ್ ನಲ್ಲಿ ಅಕೌಂಟ್ ತೆರೆದಿದ್ದ ನಝೀರ್ ಎಂಬ ವ್ಯಕ್ತಿ ತನ್ನ ಬ್ಯಾಂಕ್ ಖಾತೆಗೆ 250 ರೂಪಾಯಿ ಜಮೆ ಮಾಡಿದ್ದಾನೆ.ಆದರೆ ಆತನ ಮೊಬೈಲ್ಗೆ ತನ್ನ  ಬ್ಯಾಂಕ್ ಅಕೌಂಟ್'ಗೆ 1.26 ಕೋಟಿ ಜಮೆ ಮಾಡಲಾಗಿದೆ ಎಂದು ಮೆಸೇಜ್ ಬಂದಿದೆ. ಎಟಿಎಮ್ ಗೆ ತೆರಳಿ ಪರಿಶೀಲಿಸಿದಾಗಲೂ ಅಕೌಂಟ್'ನಲ್ಲಿ 1,26,76,436 ರೂಪಾಯಿ ಬ್ಯಾಲೆನ್ಸ್ ಇರುವುದಾಗಿ ತೋರಿಸಿದೆ. 
ಇದರಿಂದ ತಬ್ಬಿಬ್ಬಾದ ನಝೀರ್ ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಮಾಡಿ ವಿಚಾರಿಸಿದ್ದಾನೆ. ಬ್ಯಾಂಕ್ ಅಧಿಕಾರಿಗಳೂ ಹಣ ಹೇಗೆ ಜಮೆಯಾಯಿತು ಎಂಬ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.ಪ್ರಕರಣವನ್ನೂ ಕೈಗೆತ್ತಿಕೊಂಡಿರುವ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

No comments