ಜ್ಯೂನಿಯರ್ ಹಾಕಿ ವಿಶ್ವಕಪ್, ಜಯಗಳಿಸಿದ ಭಾರತ ಹಾಕಿ ತಂಡ.
ಲಕ್ನೌ : ಜ್ಯೂನಿಯರ್ ಹಾಕಿ ವಿಶ್ವಕಪ್ ನಲ್ಲಿ ಭಾರತದ ಕಿರಿಯ ಹಾಕಿ ತಂಡ ಬೆಲ್ಜಿಯಂ ಎದುರು 2-1 ಅಂತರದಲ್ಲಿ ಜಯಗಳಿಸಿದೆ. ಈ ಗೆಲುವಿನೊಂದಿಗೆ ಭಾರತ ಎರಡನೇ ಬಾರಿಗೆ ಜ್ಯೂನಿಯರ್ ಹಾಕಿ ವಿಶ್ವಕಪ್ ಗೆದ್ದಿದೆ.
ಭಾರತದ ಗುರ್ಜರ್ ಸಿಂಗ್ ಹಾಗೂ ಸಿಮ್ರನ್ಜಿತ್ ಸಿಂಗ್ ಅವರು ಮೊದಲಾರ್ಧದಲ್ಲಿಯೇ ಒಂದೊಂದು ಗೋಲು ದಾಖಲಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದು ಕೊಟ್ಟರು. ದ್ವಿತೀಯಾರ್ಧದಲ್ಲಿ ಬೆಲ್ಜಿಯಂಗೆ ಒಂದು ಗೋಲು ಗಳಿಸಲಷ್ಟೇ ಸಾಧ್ಯವಾಯಿತು.ಈ ಮೂಲಕ ಭಾರತದ ಕಿರಿಯರ ತಂಡ 15 ವರ್ಷಗಳ ನಂತರ ಮತ್ತೊಮ್ಮೆ ಕಿರಿಯರ ಹಾಕಿ ವಿಶ್ವಕಪ್ ಗೆಲುವು ಸಾಧಿಸಿತು.
No comments