Breaking News

ಪ್ರಧಾನಿ ಮೋದಿ ಗುರಿಯಾಗಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹ.

ಪಾಟ್ನಾ : ಚಿತ್ರನಟ ಹಾಗೂ ಬಿಜೆಪಿ ಸಂಸದ ಶತ್ರುಘ್ನ ಸಿನ್ಹ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಾಟ್ನಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು "ಕೆಲವರು ಕಾಂಗ್ರೆಸ್ ಮುಕ್ತ ಭಾರತ ಮಾಡುವ ಬಗ್ಗೆ ಮಾತನಾಡುತ್ತಾರೆ ಆದರೆ ಅದರ ಬದಲು ತಂಬಾಕು ಮುಕ್ತ ಭಾರತ ಮಾಡುವ ಬಗ್ಗೆ ಕೆಲಸ ಮಾಡಿದರೆ ಲಕ್ಷಾಂತರ ಜನರಿಗೆ ಇದರಿಂದ ಉಪಯೋಗವಾಗಲಿದೆ" ಎಂದು ಹೇಳಿದ್ದಾರೆ
ಇದೇ ಸಮಯದಲ್ಲಿ ನೋಟು ನಿಶೇಧದ ಕುರಿತು ಮಾತನಾಡಿದ ಅವರು ನೋಟು ನಿಶೇಧದ ನಿರ್ಧಾರ ಒಂದು ಉತ್ತಮ ಕಾರ್ಯ ಆದರೆ ಸರಿಯಾದ ತಯಾರಿ ಕೈಗೊಳ್ಳದೆ ಇಂತಹ ದೊಡ್ಡ ನಿರ್ಧಾರ ಕೈಗೊಂಡಿರೋದು ತಪ್ಪು, ಇದರಿಂದ ದೇಶದ ಬಡಜನರು ಈಗ ತೊಂದರೆಗೆ ಸಿಲುಕಿದ್ದಾರೆ ಎಂದಿದ್ದಾರೆ.
ಈ ಹಿಂದೆಯೂ ಶತ್ರುಘ್ನ ಸಿನ್ಹ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ್ದರು. ನೋಟು ನಿಶೇಧದ ಕುರಿತು ನಡೆಸಿದ ಸರ್ವೇಯಲ್ಲಿ 90ಪ್ರತಿಶತ ಜನರು ನೋಟು ನಿಶೇಧದ ಪರವಿದ್ದಾರೆ ಎಂದು ಹೇಳಿಕೆಗಳನ್ನು ಬಿಜೆಪಿ ನೀಡಿರುವುದರ ಕುರಿತು ಶತ್ರುಘ್ನ ಸಿನ್ಹ ಅವರು "ನಾವು ಮೂರ್ಖರ ಜಗತ್ತಿನಲ್ಲಿ ಬದುಕುತ್ತಿದ್ದೇವೆಯೆ, ಸ್ವಾರ್ಥಕ್ಕಾಗಿ ತಾವೇ ಸೃಷ್ಟಿಸಿದ ಸುದ್ದಿ ಹಾಗೂ ಸರ್ವೇಗಳನ್ನು ನೀಡುವುದನ್ನು ನಿಲ್ಲಿಸುವಂತೆ" ಬಿಜೆಪಿಗೆ ತಾಕೀತು ಮಾಡಿದ್ದರು.

No comments