ತುಮಕೂರಿನಲ್ಲಿ ತಂದೆಯಿಂದಲೇ ಸಾಕುಮಗಳ ಮೇಲೆ ನಿರಂತರ ಅತ್ಯಾಚಾರ. ಗರ್ಭಿಣಿಯಾದ 17ರ ಬಾಲಕಿ.
ತುಮಕೂರು : ತುಮಕೂರಿನ ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ತಂದೆಯೊಬ್ಬ ತನ್ನ ಅಪ್ರಾಪ್ತ ವಯಸ್ಸಿನ ಸಾಕುಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. 17ವರ್ಷದ ಬಾಲಕಿ ಈಗ ತಂದೆಯ ಹೀನ ಕೃತ್ಯಕ್ಕೆ 5 ತಿಂಗಳ ಗರ್ಭಿಣಿಯಾಗಿದ್ದಾಳೆ.
ಪ್ರಕರಣ ಚಿಕ್ಕನಾಯಕನಹಳ್ಳಿಯಲ್ಲಿ ಬೆಳಕಿಗೆ ಬಂದಿದ್ದು, 46 ವರ್ಷ ವಯಸ್ಸಿನ ಜಯರಾಮ ಎಂಬಾತನೆ ಸಾಕು ಮಗಳ ಮೇಲೆ ಅತ್ಯಾಚಾರ ಮಾಡಿದ ಆರೋಪಿ. ಸದಾ ಕುಡಿದು ಮನೆಗೆ ಬರುತ್ತಿದ್ದ ಆರೋಪಿ ಜಯರಾಮ, ಬಾಲಕಿಯ ತಾಯಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ನಿರಂತರ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಬಾಲಕಿ ತಾನು ಓದುತ್ತಿದ್ದ ಶಾಲೆಯ ಶಿಕ್ಷಕಿಗೆ ವಿಷಯ ತಿಳಿಸಿದ್ದು, ಶಿಕ್ಷಕಿ ಬ್ಲಾಕ್ ಶಿಕ್ಷಣಾಧಿಕಾರಿ ನೆರವಿನೊಂದಿಗೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ಪೋಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿಯನ್ನು ತುಮಕೂರಿನ ಮಹಿಳಾ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ ಉಪಚರಿಸಲಾಗುತ್ತಿದೆ.
No comments