Breaking News

ವಿಮಾನ ಅಪಘಾತ ತಡೆಯಲು ಮೇಕೆ ಬಲಿಕೊಟ್ಟ ಪಾಕಿಸ್ತಾನಿ ಅಧಿಕಾರಿಗಳು.

ಪಾಕಿಸ್ತಾನ : ಪಾಕಿಸ್ತಾನದ ಇಸ್ಲಮಾಬಾದ್ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ನಡೆಸುವ ರನ್ವೇಗೆ ಕಪ್ಪು ಮೇಕೆಯೊಂದನ್ನು ಬಲಿಕೊಡಲಾಗಿದೆ. ಪಾಕಿಸ್ತಾನ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ವಿಮಾನ ಅಪಘಾತ ತಡೆಯುವ ಕಾರಣಕ್ಕೆ ಈ ಬಲಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಡಿಸಂಬರ್ 7ರಂದು ಹವೇಲಿಯನ್ ಬಳಿ ಫ್ರಾನ್ಸ್ ನಿರ್ಮಿತ ಟರ್ಬೊಪ್ರಾಪ್ ವಿಮಾನ ಪತನಗೊಂಡು 47 ಮಂದಿ ಸಾವಿಗೀಡಾಗಿದ್ದು, ಇಂತಹ ದುರ್ಘಟನೆಗಳು ಮತ್ತೆ ಸಂಭವಿಸಬಾರದು ಎಂದು ಪಿಐಎ ಅಧಿಕಾರಿಗಳು ಈ ಕ್ರಮ ಕ್ರಮಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಪಿಐಎ ಅಧಿಕಾರಿಗಳು ಎಟಿಆರ್ ವಿಮಾನ ಕಾರ್ಯಾಚರಿಸುವ ಹಿನ್ನೆಲೆಯಲ್ಲಿ ಮೇಕೆ ಬಲಿ ಕೊಟ್ಟಿದ್ದಾಗಿ ಹೇಳಿದ್ದಾರೆ. ಹವೇಲಿಯನ್ ಬಳಿ ವಿಮಾನ ಪತನವಾದ ಬಳಿಕ ಇಸ್ಲಮಾಬಾದ್ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನಗಳು ಹಾರಾಟ ನಡೆಸಿರಲಿಲ್ಲ.
ಪಾಕಿಸ್ತಾನದ ಅಧಿಕಾರಿಗಳ ಈ ಕ್ರಮ ಎಲ್ಲೆಡೆಯಿಂದ ಠೀಕೆಗೆ ಗುರಿಯಾಗಿದೆ.


No comments