ಅನಧಿಕೃತ ಶರೀಯತ್ ನ್ಯಾಯಾಲಯ ಕಾರ್ಯಾಚರಿಸದಂತೆ ಮದ್ರಾಸ್ ಹೈಕೋರ್ಟ್ ಆದೇಶ.
ತಮಿಳುನಾಡು : ಅನಿವಾಸಿ ಭಾರತೀಯರೊಬ್ಬರು ತಮಿಳುನಾಡಿನ ಮಸೀದಿಗಳಲ್ಲಿ ಕಾರ್ಯಾಚರಿಸುವ ಶರಿಯತ್ ಕೋರ್ಟ್ ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸಿದ ಮದ್ರಾಸ್ ಹೈಕೋರ್ಟ್, ಅನಧಿಕೃತ ಶರೀಯತ್ ಕೋರ್ಟ್ ಕಾರ್ಯಾಚರಿಸದಂತೆ ಆದೇಶ ನೀಡಿದೆ.
ಅನಿವಾಸಿ ಭಾರತೀಯ ಅಬ್ದುಲ್ ರೆಹಮಾನ್ ಎಂಬವರು ಚೆನ್ನೈನ ಮಕ್ಕಾ ಮಸೀದಿಯಲ್ಲಿ ಕಾರ್ಯಾಚರಿಸುತ್ತಿರುವ ಶರೀಯತ್ ನ್ಯಾಯಾಲಯ ತಾನು ಶರೀಯತ್ ಕಾನೂನಿನ ಪ್ರಕಾರ ನ್ಯಾಯದಾನ ಮಾಡುತ್ತಿರುವುದಾಗಿ ಮುಸ್ಲಿಮರನ್ನು ವಂಚಿಸಿ ಆದೇಶಗಳನ್ನು ಹೊರಡಿಸುತ್ತಿದೆ ಎಂದು ದೂರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಯಾವುದೇ ಧಾರ್ಮಿಕ ಸ್ಥಳಗಳು ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗಿರಬೇಕು, ಅನಧಿಕೃತವಾಗಿ ಶರೀಯತ್ ಕೋರ್ಟ್'ಗಳು ಕಾರ್ಯಾಚರಿಸದಂತೆ ಆಜ್ಞೆ ಮಾಡಿದೆ. ಈ ಆದೇಶವನ್ನು ಎರಡು ವಾರಗಳೊಳಗೆ ಜಾರಿಗೊಳಿಸಿ ವರದಿ ನೀಡಬೇಕೆಂದು ತಮಿಳುನಾಡು ಸರ್ಕಾರಕ್ಕೆ ಆದೇಶಿಸಿದೆ.
No comments