Breaking News

ಇಂಡೊನೇಷ್ಯಾದಲ್ಲಿ ಪೋಲೀಸ್ ಇಲಾಖೆಗೆ ಸೇರಿದ ವಿಮಾನ ಕಣ್ಮರೆ.

ಇಂಡೊನೇಷ್ಯಾ : ಇಂಡೊನೇಷ್ಯಾ ಪೋಲೀಸ್ ಇಲಾಖೆಗೆ ಸಂಬಂಧಿಸಿದ ವಿಮಾನವೊಂದು ವಾಯು ಸಂಚಾರ ನಿಯಂತ್ರಣ ಇಲಾಖೆಯಿಂದ ಸಂಪರ್ಕ ಕಡಿದುಕೊಂಡು  ಕಣ್ಮರೆಯಾಗಿದೆ.ಇಂಡೊನೇಷ್ಯಾ ಪೋಲೀಸ್ ಇಲಾಖೆಗೆ ಸೇರಿದ M28 ಸ್ಕೈ ಟ್ರಕ್ ವಿಮಾನ ಐವರು ಸಿಬ್ಬಂದಿ ಹಾಗೂ ಎಂಟು ಪ್ರಯಾಣಿಕರು ಸೇರಿ ಒಟ್ಟು 13 ಜನರನ್ನು ಹೊತ್ತು ಇಂಡೊನೇಷ್ಯಾದ ರಿಯಾವು ದ್ವೀಪಕ್ಕೆ ಸಾಗುತ್ತಿತ್ತು.
ಸ್ಥಳೀಯ ಮೀನುಗಾರರಿಗೆ ಬಟ್ಟೆ,  ಸೂಟ್ಕೇಸ್ ಹಾಗೂ ವಿಮಾನದ ಆಸನಗಳು ದೊರೆತಿದ್ದು ವಿಮಾನ ಪತನವಾಗಿರಬಹುದು ಎಂದು ಶಂಕಿಸಲಾಗಿದೆ.ವಿಮಾನದ ಹುಡುಕಾಟಕ್ಕಾಗಿ ರಕ್ಷಣಾ ತಂಡ ರಚಿಸಲಾಗಿದ್ದು, ದುರ್ಘಟನೆ ಸಿಂಗಾಪೋರ್ ಬಳಿ ಸಂಭವಿಸಿರುವುದರಿಂದ ಸಿಂಗಾಪುರ ಸರ್ಕಾರ ರಕ್ಷಣಾ ಕಾರ್ಯಾಚರಣೆಗೆ ಕೈ ಜೋಡಿಸಿದೆ.
ವಾಯುಯಾನದಲ್ಲಿ ಇಂಡೋನೇಷ್ಯಾ ಅತ್ಯಂತ ಕಳಪೆ ದಾಖಲೆ ಹೊಂದಿದೆ.ಕಳೆದ ಒಂದು ತಿಂಗಳಿನಿಂದ ಇದು ಮೂರನೆ ವಿಮಾನ ದುರ್ಘಟನೆಯಾಗಿದೆ.ವಾರದ ಹಿಂದೆಯಷ್ಟೇ ಇಂಡೋನೇಷ್ಯಾದ ಸೇನೆಗೆ ಸೇರಿದ ವಿಮಾನ ಪತನವಾಗಿ ಮೂವರು ಸಿಬ್ಬಂದಿ ಮೃತಪಟ್ಟಿದ್ದರು.

No comments