ಅಭಿಮಾನಿಗಳ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕಾರ್ ಕಿಡ್ನಾಪ್...!!!
ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕಾಮೆರೂನ್ ಕ್ರಿಕೆಟ್ ದೇವರು ಎಂದೇ ವಿಶ್ವವಿಖ್ಯಾತವಾಗಿರುವ ಸಚಿನ್ ತೆಂಡುಲ್ಕಾರ್'ರನ್ನು ಕಿಡ್ನಾಪ್ ಮಾಡ್ತಾರಂತೆ.
ಏನು ಸುದ್ದಿ ಕೇಳಿ ದುಡ್ಡಿಗಾಗಿ ಕಿಡ್ನಾಪ್ ಮಾಡ್ತಾರೆ ಅಂದ್ಕೊಂಡ್ರ..? ಖಂಡಿತ ಅಲ್ಲ. ಹಿಂದುಸ್ತಾನ್ ಟೈಮ್ಸ್ ನಡೆಸುತ್ತಿರುವ ವಿಶ್ವದ ಪ್ರಮುಖ ನಾಯಕರ ಶೃಂಗಸಭೆಯಲ್ಲಿ ಮಾತನಾಡುತ್ತಾ ಅವರು ಸಚಿನ್ ಅವರನ್ನು ಅಪಹರಿಸುವ ಬಗ್ಗೆ ಹಾಸ್ಯ ಮಾಡಿದರು.
ಭಾರತದಲ್ಲಿ ಟೆಸ್ಟ್ ಪಂದ್ಯಾಟವನ್ನು ಆಡುತ್ತಿರುವ ಇಂಗ್ಲೆಂಡ್ ಐದು ಪಂದ್ಯಾಟಗಳ ಟೆಸ್ಟ್ ಸೀರೀಸ್'ನಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡದ ಎದುರು ಸೋತಿದ್ದು, ಬಾಕಿ ಇರುವ ಎರಡು ಪಂದ್ಯಾಟಕ್ಕೆ ಇಂಗ್ಲೆಂಡ್ ತಂಡವನ್ನು ಪಳಗಿಸಲು ಸಚಿನ್ ತೆಂಡುಲ್ಕರ್'ರನ್ನ ಅಪಹರಿಸುವ ಅವಶ್ಯಕತೆ ಇದೆ ಎಂದು ಅವರು ಹಾಸ್ಯವಾಗಿ ಹೇಳಿದರು.
ಅಭಿವೃದ್ದಿಗಾಗಿ ಭಾರತದಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕುರಿತು ಹಿಂದುಸ್ತಾನ್ ಟೈಮ್ಸ್ ನಡೆಸುತ್ತಿರುವ ವಿಚಾರ ಸಂಕೀರ್ಣದಲ್ಲಿ ಚರ್ಚಿಸಲು ಪ್ರಪಂಚದಾದ್ಯಂತ ಹಲವು ಪ್ರಮುಖ ನಾಯಕರು ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಕಾಮೆರೂನ್ "ಪ್ರತಿಯೊಂದು ಬಾರಿ ಭಾರತಕ್ಕೆ ಬಂದಾಗ ಭಾರತದಲ್ಲಾಗುತ್ತಿರುವ ಬದಲಾವಣೆ, ಅಭಿವೃದ್ಧಿ ನೋಡಿ ಬೆರಗಾಗುತ್ತೇನೆ"ಎಂದು ಹೇಳಿದರು. ಇದೇ ಸಮಯದಲ್ಲಿ ಅವರು ತಮಗೆ ಕ್ರಿಕೆಟ್ ಮೇಲಿರುವ ಪ್ರೀತಿ ವ್ಯಕ್ತಪಡಿಸಿದರು
ಇಷ್ಟಕ್ಕೆ ನಿಲ್ಲಿಸದೆ ಕಾಮೆರೂನ್ ಮೂರು ವಿಷಯಗಳನ್ನು ನೆರೆದಿದ್ದ ಜನರಿಗೆ ಹೇಳಿದರು.
ಎಂದಿಗೂ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಜೊತೆ ಗಾಲ್ಫ್ ಆಡಲು ಹೋಗಬೇಡಿ, ಯಾಕೆಂದರೆ ಅವರೆದುರು ನಿಮಗೆ ಗೆಲ್ಲಲು ಸಾಧ್ಯವಿಲ್ಲ
ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬರ್ಲುಸ್ಕೋನಿ ಜೊತೆ ಎಂದಿಗೂ ಪಾರ್ಟಿಗೆ ಹೋಗಬೇಡಿ
ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ 60,000 ಜನ ನೆರೆದಿರುವ ಸಮಾವೇಶದಲ್ಲಿ ಸ್ಟೇಜ್ ಹತ್ತಬೇಡಿ. ಮೋದಿಯ ವಾಕ್ಚಾತುರ್ಯ ಅವರು ಜನರ ಜೊತೆ ಬೆರೆಯುವ ರೀತಿ ಬೇರೆಯವರಿಗೆ ನೆರೆದಿರುವ ಜನರ ಜೊತೆ ಬೆರೆಯಲು ಸಾಧ್ಯವಿಲ್ಲ. ಎಂದರು
No comments