ಐಟಿ ಬಲೆಗೆ ಬಿದ್ದ ದೊಡ್ಡ ತಿಮಿಂಗಿಲ ಯಶವಂತಪುರದ ಫ್ಲ್ಯಾಟ್‌ನಲ್ಲಿ 2.80 ಕೋಟಿ ಪತ್ತೆ
ಬೆಂಗಳೂರು : ಕಪ್ಪು ಹಣದ ವಿರುದ್ಧ ಸಮರ ಸಾರಿ ದೇಶದ ಎಲ್ಲೆಡೆ ಕಾರ್ಯಾಚರಣೆ ಕೈಗೊಳ್ಳುತ್ತಿರುವ ಐಟಿ ಅಧಿಕಾರಿಗಳು ಇಂದು ಬೆಂಗಳೂರಿನ ಯಶವಂತಪುರದ ಫ್ಲ್ಯಾಟ್ ಒಂದರಲ್ಲಿ ದಾಳಿ ನಡೆಸಿ 2.80 ಕೋಟಿ ಕಪ್ಪು ಹಣವನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ .
ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ಯಶವಂತಪುರದ ಫ್ಲ್ಯಾಟ್ ಒಂದಕ್ಕೆ ದಾಳಿ ನಡೆಸಿದರು .ಈ ಸಂದರ್ಭದಲ್ಲಿ ಫ್ಲ್ಯಾಟ್‌ನಲ್ಲಿ ವೃದ್ಧೆ ಮಾತ್ರ ಇದ್ದರು ಡಿಸೆಂಬರ್ ೧೩ರೆಂದು ದಾಳಿ ನಡೆಸಿದ ಸಂದರ್ಭದಲ್ಲಿ ಸಹಕರಿಸದ ಆಕೆ, ನಾಯಿಗಳನ್ನು ಕಟ್ಟಿ ಹಾಕಲು ನಿರಾಕರಿಸಿದ್ದರು. ನಂತರ ತನಿಖಾ ತಂಡ ಕಾರ್ಯಾಚರಣೆ ಮುಂದುವರಿಸಲು ಪೊಲೀಸರ ನೆರವು ಪಡೆದಿತ್ತು..ಫ್ಲ್ಯಾಟ್‌ನಲ್ಲಿ ಪತ್ತೆಯಾದ ಅಷ್ಟೂ ಹಣವನ್ನು ಮುಟ್ಟುಗೋಲು ಹಾಕಿಕೊಂಡಿರುವ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ
source -vk
No comments