Breaking News

ರಾಜಕೀಯ ಭವಿಷ್ಯದ ಮುಂದಿನ ದಾರಿ ಹಿಡಿಯಲು ಗೊಂದಲದಲ್ಲಿ ಇದ್ದಾರೆ ಜಯಪ್ರಕಾಶ್ ಹೆಗ್ಡೆ ?


ಕುಂದಾಪುರ : ಕಳೆದ mlc  ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಮುನಿಸಿಕೊಂಡು ಬಂಡಾಯ ಭಾವುಟ ಹಾರಿಸಿದ ಮಾಜಿ ಸಂಸದ  ಜಯಪ್ರಕಾಶ್ ಹೆಗ್ಡೆ ಅವರ ರಾಜಕೀಯ ಭವಿಷ್ಯದ ಮುಂದಿನ ದಾರಿ ಹಿಡಿಯಲು ಗೊಂದಲದಲ್ಲಿ ಇದ್ದಾರೆ ಎಂದು ಅವರ ಆಪ್ತ ವಲಯದಿಂದ ಕೇಳಿ ಬಂದಿದೆ .ಕಾಂಗ್ರೆಸ್ ನಿಂದ ಹೊರ ಬಂದ ನಂತರ ಇವರು ಬಿಜೆಪಿ ಸೇರುತ್ತಾರೆ ಎಂದು ಮಾತು ಕೇಳಿಬರುತ್ತಿತ್ತು .ರಾಜ್ಯ ಬಿಜೆಪಿ ಹಿರಿಯ ನಾಯಕರು ಇವರ ಕೆಲ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸದ ಕಾರಣ ಇವರು  ಕೆಲವು ದಿನಗಳ ಹಿಂದೆ ಬಿಜೆಪಿ ಆಯೋಜಿಸಿದ್ದ ಹಿಂದುಳಿದ ವರ್ಗದ ಸಮಾವೇಶದಲ್ಲಿ ಸೇರ್ಪಡೆ ಆಗಲಿಲ್ಲ ನಂತರದ ಬೆಳವಣಿಗೆಯಲ್ಲಿ ತಾವು ಯಾವ ಪಕ್ಷಕ್ಕೆ ಸೇರ್ಪಡೆಗೊಳ್ಳಬೇಕೆಂದು  ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು ,ಇದಕ್ಕಾಗಿ ಬ್ರಹ್ಮಾವರದ ಆಶ್ರಯ ಹೋಟೇಲಿನಲ್ಲಿ  ಒಂದು ಸಭೆಯನ್ನು ಕೂಡ ನಡೆಸಿದ್ದು  ಸಂಜೆ 4.30ಕ್ಕೆ ಆರಂಭಗೊಂಡ ಅಭಿಮಾನಿಗಳ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಲ್ಲಿ ಶೇ 85ರಷ್ಟು ಮಂದಿ ಬಿಜೆಪಿ ಸೇರಲು ಒಪ್ಪಿದರೆ, ಶೇ 5ರಷ್ಟು ಮಂದಿ ಜೆಡಿಎಸ್‍ಗೆ ಹೋಗಿ ಎಂದಿದ್ದಾರೆ ಮತ್ತು ಶೇ 10 ಮಂದಿ ಕಾಂಗ್ರೆಸ್‍ಗೆ ಮರಳಿ ಎಂದಿದ್ದಾರೆ .ಕೊನೆಗೂ ಸಭೆಯಲ್ಲಿ ಅಂತಿಮ ನಿರ್ಣಯಕ್ಕೆ ಬರಲಾಗಿಲ್ಲ  ನಂತರ ಮತ್ತೆ ಮಾತನಾಡಿದ ಹೆಗ್ಡೆ, ಚಿಕ್ಕಮಗಳೂರಿನಲ್ಲಿಯೂ ಸಭೆ ನಡೆಸಿ ಅಲ್ಲಿನ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ .

No comments